ವದೆಹಲಿ: ಭಾರತೀಯರಿಗೆ ಡಿಸೆಂಬರ್ ತಿಂಗಳು ಪೂರ್ತಿ ವೀಸಾ ಮುಕ್ತ ಪ್ರಯಾಣಕ್ಕೆ ಮಲೇಷ್ಯಾ ಸರ್ಕಾರ ಅವಕಾಶ ನೀಡಿದೆ. ಈ ಅವಕಾಶ ಚೀನಾ ಪ್ರಜೆಗಳಿಗೂ ಲಭ್ಯ ಎಂದು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಥೈಲ್ಯಾಂಡ್ ಹಾಗೂ ಶ್ರೀಲಂಕಾ ಭಾರತೀಯ ಪ್ರಯಾಣಿಕರಿಗೆ ವೀಸಾ ಮುಕ್ತ ಭೇಟಿಗೆ ಅವಕಾಶ ನೀಡಿತ್ತು. ಭದ್ರತಾ ತಪಾಸಣೆಯನ್ನು ಕಡ್ಡಾಯವಾಗಿ ನಡೆಸಿ ಅಪರಾಧ ಹಿನ್ನಲೆಯುಳ್ಳವರಿಗೆ ಮಾತ್ರವೇ ವೀಸಾ ನಿರಾಕರಿಸಲಾಗುವುದು ಎಂದು ಹೇಳಿತ್ತು.
ಅಲ್ಲದೆ, ಚೀನಾ ಜೊತೆಗಿನ ರಾಜತಾಂತ್ರಿಕ ಬಾಂಧವ್ಯಕ್ಕೆ 50 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಲೇಷ್ಯಾ ಪ್ರಜೆಗಳಿಗೆ 15 ದಿನಗಳ ವೀಸಾ ಮುಕ್ತ ಪ್ರಯಾಣಕ್ಕೆ ಅವಕಾಶ ನೀಡುವ ಘೋಷಣೆಯನ್ನು ಚೀನಾ ವಿದೇಶಾಂಗ ಸಚಿವಾಲಯ ಮಾಡಿತ್ತು. ಅದರ ಬೆನ್ನಿಗೆ ಉಭಯ ದೇಶಗಳು ವೀಸಾ ಮುಕ್ತ ಪ್ರಯಾಣದ ಘೋಷಣೆ ಮಾಡಿವೆ. ಜೊತೆಗೆ ಭಾರತಕ್ಕೂ ಆಫರ್ ನೀಡಿದೆ.
2022ರಲ್ಲಿ ಮಲೇಷ್ಯಾ ಜೊತೆಗೆ ವ್ಯಾಪಾರ ನಡೆಸಿದ ಪಾಲುದಾರಿಕೆ ರಾಷ್ಟ್ರಗಳ ಪೈಕಿ ಭಾರತಕ್ಕೆ 11ನೇ ಸ್ಥಾನ ಲಭಿಸಿದೆ. 2021ರ ಹೋಲಿಕೆಯಲ್ಲಿ ಶೇ.23.6ರಷ್ಟು ವ್ಯಾಪಾರ ವೃದ್ಧಿಯಾಗಿದೆ.