ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಭಾರತೀಯ ಸಂಜಾತ ವಿವೇಕ್ ರಾಮಸ್ವಾಮಿ

Prasthutha|

- Advertisement -

ವಾಷಿಂಗ್ಟನ್: ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಅವರು 2024 ರಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

37 ವರ್ಷದ ವಿವೇಕ್ ರಾಮಸ್ವಾಮಿ, ಆರೋಗ್ಯ – ತಂತ್ರಜ್ಞಾನ ವಿಭಾಗದ ಉದ್ಯಮಿ ಮತ್ತು ಲೇಖಕರಾಗಿದ್ದಾರೆ.

- Advertisement -

ಈ ಸ್ಪರ್ಧೆಯು ಕೇವಲ ರಾಜಕೀಯಕ್ಕಾಗಿ ಅಲ್ಲ. ಬದಲಾಗಿ ಮುಂದಿನ ಪೀಳಿಗೆಯ ಅಮೆರಿಕನ್ನರಿಗೆ ಹೊಸ ಕನಸನ್ನು ಸೃಷ್ಟಿಸುವ ಸಾಂಸ್ಕೃತಿಕ ಆಂದೋಲನವಾಗಿದೆ ಎಂದು ವಿವೇಕ್ ರಾಮಸ್ವಾಮಿ ಹೇಳಿದ್ದಾರೆ.
ಈ ದೇಶದಲ್ಲಿ ಆದರ್ಶಗಳನ್ನು ಪುನರುಜ್ಜೀವನಗೊಳಿಸಲು ತಾನು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಅವರು ಹೇಳಿದರು.

Join Whatsapp