ಇಸ್ಲಾಮಾಬಾದ್: ವಿಶ್ವಸಂಸ್ಥೆಯ ನಿರ್ಣಯದ ವಿರುದ್ಥ ತೀರ್ಪನ್ನು ನೀಡುವ ಮೂಲಕ ಭಾರತೀಯ ಸುಪ್ರೀಂಕೋರ್ಟ್ ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಶಹಬಾಝ್ ಶರೀಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸುಪ್ರೀಂಕೋರ್ಟ್ ಲಕ್ಷಾಂತರ ಕಾಶ್ಮೀರಿಗಳ ಬಲಿದಾನಕ್ಕೆ ದ್ರೋಹ ಬಗೆದಿದೆ. ಭಾರತೀಯ ಸುಪ್ರೀಂಕೋರ್ಟ್ ನ ಈ ಪಕ್ಷಪಾತದ ನಿರ್ಧಾರದಿಂದಾಗಿ, ಕಾಶ್ಮೀರದ ಸ್ವಾತಂತ್ರ್ಯ ಹೋರಾಟವು ಬಲಿಷ್ಠಗೊಳ್ಳಲಿದೆ. ಕಾಶ್ಮೀರಿ ಹೋರಾಟವು ಕುಗ್ಗಲಾರದು ಎಂದು ಅವರು ಹೇಳಿದ್ದಾರೆ.
ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದತಿಯನ್ನು ಎತ್ತಿಹಿಡಿದ ಭಾರತದ ಸುಪ್ರೀಂಕೋರ್ಟ್ ತೀರ್ಪಿಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಹೀಗೆ ಪ್ರತಿಕ್ರಿಯಿಸಿದ್ದು, ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾವಿಸುವುದನ್ನು ಪಾಕಿಸ್ತಾನವು ಮುಂದುವರಿಸಲಿದೆಯೆಂದು ಹೇಳಿದ್ದಾರೆ.