ನವದೆಹಲಿ: ಉಕ್ರೇನ್ ನಲ್ಲಿ 13 ಸಾವಿರಕ್ಕೂ ಹೆಚ್ಚು ಭಾರತೀಯರು ಸಿಲುಕಿಕೊಂಡಿರುವ ನಡುವೆಯೇ ಕಾಂಗ್ರೆಸ್ ನಾಯಕ ರಾಹುಲ್ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.
ಈ ವೀಡಿಯೋದಲ್ಲಿ ತಮ್ಮ ಲಗೇಜ್ ಸಮೇತ ಕುಳಿತಿದ್ದವರನ್ನು ಯೋಧರು ಬಲವಂತವಾಗಿ ಎಳೆದಾಡುತ್ತಿರುವುದು ಹಾಗೂ ಸ್ಥಳದಿಂದ ತೆರವು ಮಾಡುತ್ತಿರುವುದು ಕಾಣುತ್ತದೆ. ಈ ಘಟನೆ ಪೊಲೆಂಡ್, ರೊಮೇನಿಯಾ ಗಡಿಯಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಈ ರೀತಿಯ ಹಿಂಸಾಚಾರವನ್ನು ಅನುಭವಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ಈ ವೀಡಿಯೊಗಳನ್ನು ವೀಕ್ಷಿಸುತ್ತಿರುವುದು ನೋವಿನ ಸಂಗತಿ ಎಂದು ರಾಹುಲ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.