ಇಂಡಿಯನ್ ಸೋಶಿಯಲ್ ಫೋರಂನಿಂದ ಸ್ವಾತಂತ್ರ್ಯ ದಿನಾಚರಣೆಯ ಸಮಾರೋಪ ಸಮಾರಂಭ, ಪ್ರಶಸ್ತಿ ಪ್ರದಾನ 

Prasthutha|

ಮನಾಮ: ಭಾರತದ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಇಂಡಿಯನ್ ಸೋಶಿಯಲ್ ಫೋರಂ ಆಯೋಜಿಸಿದ್ದ ಒಂದು ತಿಂಗಳ ಅಭಿಯಾಣದ ಸಮಾರೋಪ, ಸಾಂಸ್ಕೃತಿಕ ಸಮ್ಮೇಳನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಮುಹರಕ್ ಅಲ್ ಇಸ್ಲಾಹ್ ಸಭಾಂಗಣದಲ್ಲಿ ನಡೆಯಿತು.

- Advertisement -

ಬಹರೇನ್ ನ ಸಾಮಾಜಿಕ ಕಾರ್ಯಕರ್ತರಾದ ಅಸ್ಕರ್ ಪೂಜಿತ್ತಲ (ಕೇರಳ), ರಾಜಗಿರಿ ಯೂಸುಫ್ (ತಮಿಳುನಾಡು) ಮತ್ತು ಖಲೀಕುರ್ ರೆಹಮಾನ್ (ದೆಹಲಿ) ಅವರು ಈ ಸಂದರ್ಭದಲ್ಲಿ ಶುಭಹಾರೈಸಿ ಮಾತನಾಡಿದರು.

ಸಾಮಾಜಿಕ ಕಾರ್ಯಕರ್ತ ರಶೀದ್ ಮಾಹಿ ಭಾಗವಹಿಸಿದ್ದರು.

- Advertisement -

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದವರಿಗೆ ಇಂಡಿಯನ್ ಸೋಶಿಯಲ್ ಫೋರಂ ನೀಡುವ ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಿತು.

ಶಿಕ್ಷಣ ಕ್ಷೇತ್ರದಲ್ಲಿನ ಅತ್ಯುತ್ತಮ ಕಾರ್ಯಕ್ಕಾಗಿ ಡಾ. ಮುಸ್ತಫಾ ರಜಾ ರಬ್ಬಾನಿ (ಬಿಹಾರ), ಅತ್ಯುತ್ತಮ ಶಿಕ್ಷಣತಜ್ಞ ಪ್ರಶಸ್ತಿ ಮತ್ತು ಸಮಾಜಕಾರ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸಕ್ಕಾಗಿ ಜವಾದ್ ಪಾಷಾ (ಕರ್ನಾಟಕ), ಅತ್ಯುತ್ತಮ ಸಮಾಜ ಸೇವಕ ಪ್ರಶಸ್ತಿ ಮತ್ತು ಸಾಬು ಚಿರಮ್ಮೆಲ್ ಮತ್ತು ಫೈಸಲ್ ಪತಂಡಿಯಿಲ್ (ಕೇರಳ) ಅವರಿಗೆ ಮಾನವೀಯತೆಯ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸಕ್ಕಾಗಿ ಅತ್ಯುತ್ತಮ ಮಾನವೀಯ ಪ್ರಶಸ್ತಿ, ಅಬ್ದುಲ್ ಖಯ್ಯೋಮ್ (ತಮಿಳುನಾಡು) ಅತ್ಯುತ್ತಮ ಬರಹಗಾರ ಪ್ರಶಸ್ತಿ ಮತ್ತು ಅತ್ಯುತ್ತಮ ಉದ್ಯಮಿ ಪ್ರಶಸ್ತಿಗಾಗಿ ರಿಯಾಜ್ ಬಿ. ಕೆ (ಕರ್ನಾಟಕ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ದೇಶ ಭಕ್ತಿ ಕವಿತೆ ಮತ್ತು ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳಿಗೆ  ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಕ್ಕಳ ಹಾಡು ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಗಮನ ಸೆಳೆಯಿತು

ಇಂಡಿಯನ್ ಸೋಶಿಯಲ್ ಫೋರಂ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಫೀಕ್ ಅಬ್ಬಾಸ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ರಾಜ್ಯಾಧ್ಯಕ್ಷ ಸೈಫ್ ಅಝಿಕೋಡ್, ಪ್ರಧಾನ ಕಾರ್ಯದರ್ಶಿ ಕೆ.ವಿ ಮುಹಮ್ಮದಲಿ, ಕರ್ನಾಟಕ ಘಟಕದ ಅಧ್ಯಕ್ಷ ಇರ್ಫಾನ್ ಅಬ್ದುಲ್ ರಹಮಾನ್, ಕಾರ್ಯದರ್ಶಿ ನಸೀಮ್, ತಮಿಳುನಾಡು ಘಟಕದ ಅಧ್ಯಕ್ಷ ಮುಹಮ್ಮದ್ ನವಾಝ್, ಕಾರ್ಯದರ್ಶಿ ಅತ್ತಾವುಲ್ಲಾ, ಉರ್ದು ಘಟಕದ ಅಧ್ಯಕ್ಷ ಅಲಿ ಅಖ್ತರ್ ಮತ್ತು ಕೇಂದ್ರ ಸಮಿತಿ ಸದಸ್ಯ ಯೂಸುಫ್ ಅಲಿ ಭಾಗವಹಿಸಿದ್ದರು

ಸೈಯದ್ ಸಿದ್ದೀಖ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಕೇಂದ್ರ ಸಮಿತಿ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ಸ್ವಾಗತಿಸಿ, ಅಬ್ದುಲ್ ರಶೀದ್ ವಂದಿಸಿದರು.



Join Whatsapp