ಇಂಡಿಯನ್ ಸೋಷಿಯಲ್ ಫೋರಮ್ (ISF) ಬಹರೈನ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

Prasthutha|

ಮನಾಮ: ಭಾರತದ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಇಂಡಿಯನ್ ಸೋಷಿಯಲ್ ಫೋರಮ್ ಬಹರೈನ್ ನ ಕರ್ನಾಟಕ ಘಟಕ ಆಯೋಜಿಸಿದ ಬೃಹತ್ ರಕ್ತದಾನ ಶಿಬಿರ ನಡೆದಿದೆ. ರೋಟರಾಕ್ಟ್ ಬಹರೈನ್, ಹ್ಯೂಮನ್ ವೆಲ್ಫೇರ್ ಅಸೋಸಿಯೇಷನ್ ಹಾಗೂ  ಬ್ಲಡ್ ಡೋನರ್ಸ್ ಮಂಗಳೂರು ಬಹರೈನ್ ಘಟಕ ಇದರ ಸಹಯೋಗದೊಂದಿಗೆ ಸಲ್ಮಾನಿಯ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಶಿಬಿರ ನಡೆದಿದೆ.

- Advertisement -

ಬೆಳಿಗ್ಗೆ 7:30 ಗಂಟೆಗೆ ಆರಂಭಿಸಿ 12ಗಂಟೆಯ ತನಕ ಸುಮಾರು 115 ಕ್ಕೂ ಹೆಚ್ಚು ಬೇರೆಬೇರೆ ರಾಜ್ಯ, ದೇಶಗಳ ರಕ್ತದಾನಿಗಳು ಭಾಗವಹಿಸಿದ್ದರು. ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ ನೀಡಲಾಗಿತ್ತು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇಂಡಿಯನ್ ಸೋಷಿಯಲ್ ಫೋರಮ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಫೀಕ್ ಅಬ್ಬಾಸ್,  ಬಹರೈನಿನಲ್ಲಿ ಜಾತಿಭೇದ ಮರೆತು ಇಂತಹ ಶಿಬಿರಗಳಲ್ಲಿ ಭಾಗವಹಿಸಬೇಕು ಎಂದು ಕರೆನೀಡಿದರು. ಇಂಡಿಯನ್ ಸೋಷಿಯಲ್ ಫೋರಮ್ ಕರ್ನಾಟಕ ರಾಜ್ಯಾಧ್ಯಕ್ಷ ಇರ್ಫಾನ್ ಅಬ್ದುಲ್ ರಹಿಮಾನ್ ಅಧ್ಯಕ್ಷತೆಯಲ್ಲಿ ಸಲ್ಮಾನಿಯ ಆಸ್ಪತ್ರಯ ರಕ್ತನಿಧಿ ಉಸ್ತುವಾರಿ ಡಾ. ಸಕ್ನರವರಿಗೆ ಸ್ಮರಣಿಕೆ ಕಾಣಿಕೆ ಹಸ್ತಾಂತರಿಸಲಾಯಿತು. ಮುಖ್ಯಅತಿಥಿಯಾಗಿ ರೋಟರಾಕ್ಟ್ ಬಹರೈನ್ ಇದರ ಕಾರ್ಯದರ್ಶಿ ಅಬ್ದುಲ್ಲಾಮುಹಮ್ಮದ್ ಮತ್ತು ಸಾಮುದಾಯಿಕ ನಿರ್ದೇಶಕಿ ಹದೀಲ್ಇಸಾ, ಹ್ಯೂಮನ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಸಂಶುದ್ದೀನ್ ತಲಪಾಡಿ ಮತ್ತು ಕಾರ್ಯದರ್ಶಿ   ನಾಸಿರ್ ತಲಪಾಡಿ, ಬ್ಲಡ್ ಡೋನರ್ಸ್ ಮಂಗಳೂರು ಬಹರೈನ್ ಘಟಕದ ಉಸ್ತುವಾರಿ ಫಾರೂಕ್ ಫಅದ್ ಮುಂತಾದವರು ಉಪಸ್ಥಿತರಿದ್ದರು.

Join Whatsapp