ಇಂಡಿಯನ್ ಸೋಶಿಯಲ್ ಫೋರಂ ನಾಯಕ ಹುಸೈನ್ ಜೋಕಟ್ಟೆ ಸೌದಿಯಲ್ಲಿ ನಿಧನ

Prasthutha|

ಇಂಡಿಯನ್ ಸೋಶಿಯಲ್ ಫೋರಂನ ಅಲ್ ಹಸಾ ಕರ್ನಾಟಕ ಬ್ಲಾಕ್ ಕಾರ್ಯದರ್ಶಿಯಾಗಿದ್ದ ಸಾಮಾಜಿಕ ಸೇವಾ ಕಾರ್ಯಕರ್ತ ಹುಸೈನ್ ಜೋಕಟ್ಟೆ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಹುಸೈನ್ ಅವರು ಅಲ್ ಹಸ್ಸಾದ ಪೆಪ್ಸಿಕೋ ಕಂಪನಿಯಲ್ಲಿ ವೃತ್ತಿ ನಿರ್ವಹಿಸಿಕೊಂಡಿದ್ದರು.

ಹಲವಾರು ವರ್ಷಗಳಿಂದ ಗಲ್ಫ್ ನಲ್ಲಿದ್ದ ಹುಸೈನ್ ಅವರು ಅನಿವಾಸಿಗಳಿಗೆ ಎದುರಾಗುವ ಯಾವುದೇ ಸಮಸ್ಯೆಗಳ ಕುರಿತು ಮತ್ತು ಅಗತ್ಯ ನೆರವಿನ ಕುರಿತು ಮುಂಚೂಣಿಯಲ್ಲಿ ಇರುತ್ತಿದ್ದರು. ಹುಸೈನ್ ಅವರು ಹಲವು ಸಂಘ ಸಂಸ್ಥೆ ಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದು, ಜೋಕಟ್ಟೆ ಏರಿಯಾ ಮುಸ್ಲಿಂ ವೆಲ್ಫೇರ್ ಅಸೋಶಿಯೇಶನ್ ( JAMWA ) ದ ಪೂರ್ವ ಪ್ರಾಂತ್ಯದ ಸಕ್ರಿಯ ಕಾರ್ಯಕರ್ತರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

- Advertisement -

ಕಳೆದ ಕೆಲ ದಿನಗಳಿಂದ ಅಸೌಖ್ಯದ ನಿಮಿತ್ತ ಅಲ್ ಹಸ್ಸಾದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಮೃತ ಹುಸೈನ್ ಜೋಕಟ್ಟೆಯವರು ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.

- Advertisement -