ರೈಲಿನಲ್ಲಿ ‘ಬೇಬಿ ಬರ್ತ್’ ಆಸನ: ‘ತಾಯಿ-ಮಗು’ವಿನ ಆರಾಮದಾಯಕ ಪ್ರಯಾಣಕ್ಕೆ ಅನುಕೂಲ

Prasthutha|

ನವದೆಹಲಿ: ಪುಟ್ಟ ಮಕ್ಕಳನ್ನು ಕರೆದುಕೊಂಡು ರೈಲುಗಳಲ್ಲಿ ಸಂಚರಿಸುವ ಪೋಷಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದ್ದು, ಇನ್ನು ಮುಂದೆ ರೈಲುಗಳಲ್ಲಿ ಮಕ್ಕಳಿಗಾಗಿ ‘ಬೇಬಿ ಬರ್ತ್’ ಅಳವಡಿಸಲಿದೆ.

- Advertisement -

ಭಾರತೀಯ ರೈಲ್ವೆ ಪ್ರಯಾಣಿಕರ ಆರಾಮದಾಯಕ ಪ್ರಯಾಣಕ್ಕಾಗಿ ರೈಲುಗಳಲ್ಲಿ ವಿಶೇಷ ಆಸನವನ್ನು ಪ್ರಾರಂಭಿಸಲಿದೆ. ಈ ಆಸನವು ಚಿಕ್ಕ ಮಗುವಿನೊಂದಿಗೆ ಪ್ರಯಾಣಿಸುವ ಮಹಿಳೆಯರಿಗೆ ಪ್ರಯೋಜನವನ್ನು ನೀಡಲಿದೆ. ಚಿಕ್ಕ ಮಕ್ಕಳೊಂದಿಗೆ ಪ್ರಯಾಣಿಸುವವರಿಗಾಗಿ ರೈಲಿನಲ್ಲಿ ಆಸನದ ಮೇಲೆ ಶಿಶುವಿಗೆ ರೈಲ್ವೆ ಪ್ರತ್ಯೇಕ ಬರ್ತ್ ನೀಡಿದೆ.

ತಾಯಂದಿರ ದಿನದಂದು ಉತ್ತರ ರೈಲ್ವೆಯ ಲಕ್ನೋ ರೈಲ್ವೆ ಮಹಿಳೆಯರಿಗೆ ಈ ಹೊಸ ಉಡುಗೊರೆಯನ್ನು ನೀಡಿದ್ದು, ಸೋಮವಾರ ಲಕ್ನೋದಿಂದ ನವದೆಹಲಿಗೆ ಹೋಗುವ ಲಕ್ನೋ ಮೇಲ್ ನಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಗಿದೆ. ಪ್ರಾಯೋಗಿಕ ಯೋಜನೆಯಾಗಿ ರೈಲಿನ ಎಸಿ-3 ಕೋಚ್ ನಲ್ಲಿ ಎರಡು ಆಸನಗಳಲ್ಲಿ ಈ ಬೇಬಿ ಬರ್ತ್ ಅನ್ನು ರೈಲ್ವೇಸ್ ಅಳವಡಿಸಿದೆ.



Join Whatsapp