ಅಮೆರಿಕಾದಲ್ಲಿ ಭಾರತೀಯ ಮೂಲದ ನಾಲ್ವರು ಮಹಿಳೆಯರಿಗೆ ಜನಾಂಗೀಯ ನಿಂದನೆ

Prasthutha|

ವಾಷಿಂಗ್ಟನ್: ನಾಲ್ವರು ಭಾರತೀಯ ಮೂಲದ ಮಹಿಳೆಯರ‌ ವಿರುದ್ಧ ಜನಾಂಗೀಯ ನಿಂದನೆ ಮಾಡಿದ ಮೆಕ್ಸಿಕನ್ ಮೂಲದ ಅಮೆರಿಕಾದ ಮಹಿಳೆಯನ್ನು ಪೊಲೀಸರು ಬಂಧಿಸಿದ ಘಟನೆ ಟೆಕ್ಸಾಸ್‌ನಲ್ಲಿ ನಡೆದಿದೆ.

- Advertisement -

ಟೆಕ್ಸಾಸ್‌‌ನ ದಲ್ಲಾಸ್‌ನ ಪಾರ್ಕಿಂಗ್ ಪ್ರದೇಶವೊಂದರಲ್ಲಿ ಅಮೆರಿಕಾದ ಮಹಿಳೆಯೋರ್ವಳು ನಾಲ್ವರು ಭಾರತೀಯ ಮೂಲದ ಮಹಿಳೆಯರಿಗೆ ಹಲ್ಲೆ ನಡೆಸಿ ಅವರ ವಿರುದ್ಧ ಜನಾಂಗೀಯ ನಿಂದನೆ ನಡೆಸಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ವೀಡಿಯೋದಲ್ಲಿ ಮಹಿಳೆಯು ತನ್ನನ್ನು ತಾನು ಮೆಕ್ಸಿಕನ್- ಅಮೇರಿಕನ್ ಮಹಿಳೆ ಎಂದು ಪರಿಚಯಿಸಿದ್ದು, “ನೀವು ಅಮೇರಿಕಾದಲ್ಲಿ ಹುಟ್ಟಿದವರೇ” ಎಂದು ಭಾರತೀಯ ಮೂಲದ ಅಮೆರಿಕನ್ ಮಹಿಳೆಯರನ್ನು ಪ್ರಶ್ನಿಸಿದ್ದಾಳೆ. “ನಾನು ಅಮೇರಿಕಾ ಸಂಜಾತೆ. ನಾನು ಇಲ್ಲೇ ಹುಟ್ಟಿದ್ದು. ನೀವು ಇಲ್ಲಿ ಹುಟ್ಟಿಲ್ಲವಲ್ಲ” ಎಂದು ದರ್ಪ ತೋರಿದ್ದಾಳೆ.

- Advertisement -

ಅಶ್ಲೀಲ ಪದಗಳೊಂದಿಗೆ ಭಾರತೀಯ ಮೂಲದ ಮಹಿಳೆಯರೊಂದಿಗೆ ಚಕಮಕಿ ನಡೆಸಿರುವ ಮಹಿಳೆ ಏಕಾಏಕಿ ಹಲ್ಲೆಯನ್ನೂ ನಡೆಸಿದ್ದಾಳೆ.

“ನಾನು ಭಾರತೀಯರನ್ನು ದ್ವೇಷಿಸುತ್ತೇನೆ. ನಾನು ಎಲ್ಲಿ ಹೋದರೂ ಅವರು ಅಲ್ಲಿ ಇರ್ತಾರೆ. ಅವರು ಇಲ್ಲಿ ಬಂದು ಉತ್ತಮ ಜೀವನ ಕಂಡುಕೊಳ್ಳುತ್ತಾರೆ. ಭಾರತದಲ್ಲಿ ಜೀವನ ಶೈಲಿ ಉತ್ತಮವಾಗಿದ್ದರೆ ನೀವು ಯಾಕೆ ಇಲ್ಲಿ ಬರಬೇಕು” ಎಂದು ಮಹಿಳೆ ನಿಂದನಾತ್ಮಕವಾಗಿ ಮಾತನಾಡಿದ್ದಾರೆ.

ಈ ಸಂಬಂಧ ಪ್ಲಾನೋ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಬಂಧಿತಳನ್ನು ಎಸ್ಮೆರಾಲ್ಡಾ ಅಪ್ಟಾನ್ ಎಂದು ಗುರುತಿಸಲಾಗಿದೆ.

ನನ್ನ ತಾಯಿ ಮತ್ತು ಆಕೆಯ ಮೂವರು ಗೆಳೆಯರು ರಾತ್ರಿ ಊಟಕ್ಕೆ ಹೋದ ವೇಳೆ ಈ ಘಟನೆ ನಡೆದಿದೆ ಎಂದು ವೈರಲ್ ಆದ ವೀಡಿಯೋದ ಮೇಲೆ ಬರೆಯಲಾಗಿದೆ. ಈ ವೀಡಿಯೋವನ್ನು ರೀಮಾ ರಸೂಲ್ ಎಂಬ ಮಹಿಳೆ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.

Join Whatsapp