ಸಿಂಗಪುರ: ಭಾರತ ಮೂಲದ, ಸಿಂಗಪುರದ ಆರ್ಥಿಕ ತಜ್ಞ ಥರ್ಮನ್ ಷಣ್ಮುಗರತ್ನಂ ಅವರು ಸಿಂಗಪುರದ ಅಧ್ಯಕ್ಷರಾಗಿ ಶುಕ್ರವಾರ ಆಯ್ಕೆಯಾದರು. ಮುಂದಿನ ಆರು ವರ್ಷಗಳ ಕಾಲ ಸಿಂಗಾಪುರದ ಅಧ್ಯಕ್ಷರಾಗಿ ಆಯ್ಕೆಯಾದ ಮೂರನೇ ಭಾರತೀಯ ಮೂಲದ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
66 ವರ್ಷ ವಯಸ್ಸಿನ ಮಾಜಿ ಸಚಿವರೂ ಆದ ಥರ್ಮನ್ ಅವರು ಶೇ 70.4ರಷ್ಟು ಅಂದರೆ 17.46 ಲಕ್ಷ ಮತಗಳನ್ನು ಪಡೆದರು. ಒಟ್ಟು 20.28 ಲಕ್ಷ ಮತಗಳು ಚಲಾವಣೆಯಾಗಿದ್ದವು.
ಕಣದಲ್ಲಿದ್ದ ಚೀನಾ ಮೂಲದ ಕೊಕ್ ಸೊಂಗ್ ಮತ್ತು ತನ್ ಕಿನ್ ಲಿಯನ್ ಅವರು ಕ್ರಮವಾಗಿ ಶೇ 15.72 ಹಾಗೂ ಶೇ 13.88ರಷ್ಟು ಮತ ಪಡೆದರು.
ಚುನಾವಣಾಧಿಕಾರಿ ತನ್ ಮೆಂಗ್ ದುಯಿ ತಡರಾತ್ರಿ ಫಲಿತಾಂಶವನ್ನು ಪ್ರಕಟಿಸಿದರು.