ದುಬೈಯಲ್ಲಿ ಲಾಟರಿಗೆದ್ದು ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾದ ಭಾರತ ಮೂಲದ ವಾಹನ ಚಾಲಕ

Prasthutha|

ದುಬೈ: ನಾಲ್ಕು ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ದುಬೈಗೆ ತೆರಳಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ‘ಎಮಿರೇಟ್ಸ್ ಡ್ರಾ‘ ಲಾಟರಿಯಲ್ಲಿ ಬರೋಬ್ಬರಿ 33 ಕೋಟಿ ರೂ. ಗೆದ್ದು, ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ.

- Advertisement -

ಅಜಯ್ ಒಗುಲಾ ಎಂಬ ವ್ಯಕ್ತಿ ಲಾಟರಿ ಗೆದ್ದ ಅದೃಷ್ಟವಂತ. ಸದ್ಯ ಜ್ಯುವೆಲರಿ ಅಂಗಡಿಯೊಂದರ ವಾಹನ ಚಾಲಕನಾಗಿ ದುಡಿಯುತ್ತಿರುವ ಅಜಯ್ 72000 ಮಾಸಿಕ  ವೇತನ ಪಡೆಯುತ್ತಿದ್ದಾರೆ.

ಇದೇ ಲಾಟರಿಯಲ್ಲಿ ಬ್ರಿಟಿಷ್ ಮೂಲದ ಪೌಲಾ ಲೀಚ್ ಎಂಬರು ಕೂಡ 17.5 ಲಕ್ಷ  ಗೆದ್ದಿದ್ದಾರೆ.

- Advertisement -

ಹಣ ಗೆದ್ದಿರುವ ಖುಷಿಯನ್ನು ಖಲೀಜ್ ಟೈಮ್ಸ್’ನೊಂದಿಗೆ ಹಂಚಿಕೊಂಡಿರುವ ಅಜಯ್, ‘ನಾನು ಲಾಟರಿ ಗೆದ್ದಿದ್ದೇನೆ ಎಂಬುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ.  ಮನೆಯವರೊಂದಿಗೆ ಈ ವಿಚಾರ ಹೇಳಿದಾಗಲೂ ಅವರಿಗೆ ನಂಬಿಕೆ ಬರಲಿಲ್ಲ. ಈಗ ಮಾಧ್ಯಮಗಳಲ್ಲಿ ಬರುತ್ತಿರುವಾಗ ಅವರು ನಂಬಲೇಬೇಕಾಗಿದೆ ಎಂದು ಹೇಳಿದರು.

ಈ ಹಣದಿಂದ ದತ್ತಿ ಸಂಸ್ಥೆ ಸ್ಥಾಪಿಸಿ, ತನ್ನ ಗ್ರಾಮದ ಹಾಗೂ ಪಕ್ಕದ ಗ್ರಾಮದ ಬಡವರಿಗೆ ನೆರವಾಗುತ್ತೇನೆ ಎಂದು ಅಜಯ್ ಒಗುಲಾ ಹೇಳಿದ್ದಾರೆ.

Join Whatsapp