►ತನ್ನ ಪ್ರಶಸ್ತಿಯನ್ನು ಸಿದ್ದೀಕ್ ಕಾಪ್ಪನ್, ಝುಬೈರ್ ,ಆಸಿಫ್ ಸುಲ್ತಾನ್ ಗೆ ಅರ್ಪಿಸಿದ ರಾಣಾ
ವಾಷಿಂಗ್ಟನ್: 2022ರ ಅಂತಾರಾಷ್ಟ್ರೀಯ ಜಾನ್ ಆಬುಚೊನ್ ಪ್ರಶಸ್ತಿಗೆ ಭಾರತೀಯ ಪತ್ರಕರ್ತೆ ರಾಣಾ ಅಯೂಬ್ ಅವರು ಪುರಸ್ಕೃತರಾಗಿದ್ದಾರೆ.
ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ನ್ಯಾಷನಲ್ ಪ್ರೆಸ್ ಕ್ಲಬ್ ಜರ್ನಲಿಸಂ ಇನ್ಸ್ಟಿಟೂಶನ್ ಇದರ ಅತ್ಯುನ್ನತ ಗೌರವವಾದ ಔಬುಚೊನ್ ಪ್ರಶಸ್ತಿಯನ್ನು ರಾಣಾ ಅಯ್ಯೂಬ್ ಪಡೆಯಲಿದ್ದಾರೆ ಎಂದು ನ್ಯಾಷನಲ್ ಪ್ರೆಸ್ ಕ್ಲಬ್ ಅಧ್ಯಕ್ಷ ಜೆನ್ ಜುಡ್ಸನ್ ಮತ್ತು ನ್ಯಾಷನಲ್ ಪ್ರೆಸ್ ಕ್ಲಬ್ ಜರ್ನಲಿಸಂ ಇನ್ಸ್ಟಿಟೂಶನ್ ಅಧ್ಯಕ್ಷ ಗಿಲ್ ಕ್ಲೈನ್ ಅವರು ಘೋಷಿಸಿದ್ದಾರೆ.
ರಾಣಾ ಅಯೂಬ್ ಅವರು ಸ್ವತಂತ್ರ ಪತ್ರಕರ್ತೆಯಾಗಿ ಕೆಲಸ ಮಾಡುವುದರ ಜೊತೆಗೆ ವಾಷಿಂಗ್ಟನ್ ಪೋಸ್ಟ್ ಅಭಿಪ್ರಾಯಗಳಿಗೆ ಕೊಡುಗೆ ನೀಡಿದ್ದಾರೆ. ತಮ್ಮ ಜೀವಕ್ಕೆ ಗರಿಷ್ಠ ಬೆದರಿಕೆಗಳನ್ನು ಎದುರಿಸುತ್ತಿರುವ ಹತ್ತು ಜಾಗತಿಕ ಪತ್ರಕರ್ತರಲ್ಲಿ ಟೈಮ್ ನಿಯತಕಾಲಿಕವು ಇವರ ಹೆಸರನ್ನೂ ಪ್ರಸ್ತಾಪಿಸಿದೆ.
ಆಬುಚೊನ್ ಪ್ರಶಸ್ತಿಯನ್ನು ವರ್ಷಾಂತ್ಯದವರೆಗೆ ಔಪಚಾರಿಕವಾಗಿ ತಿಳಿಸಲಾಗುವುದಿಲ್ಲವಾದರೂ, ರಾಣಾ ಅಯೂಬ್ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಾ ಕ್ಲಬ್ ಈ ಪ್ರಶಸ್ತಿಯನ್ನು ನೀಡಲು ಬಯಸಿದೆ ಎನ್ನಲಾಗಿದೆ