ಭಾರತೀಯ ಪತ್ರಕರ್ತೆ ರಾಣಾ ಅಯೂಬ್’ಗೆ ಅಮೆರಿಕದ ಅತ್ಯುನ್ನತ ಪ್ರೆಸ್ ಫ್ರೀಡಂ ಪ್ರಶಸ್ತಿ

Prasthutha|

►ಪ್ರಶಸ್ತಿಯನ್ನು ಝುಬೇರ್, ಸಿದ್ದಿಕ್ ಕಾಪ್ಪನ್, ಆಸಿಫ್ ಸುಲ್ತಾನ್’ಗೆ ಅರ್ಪಿಸಿದ ರಾಣಾ

- Advertisement -

ವಾಷಿಂಗ್ಟನ್: ಖ್ಯಾತ ಭಾರತೀಯ ಪತ್ರಕರ್ತೆ, ಲೇಖಕಿ ರಾಣಾ ಅಯೂಬ್ ಅವರು ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಪ್ರೆಸ್ ಕ್ಲಬ್ ನೀಡುವ ಪ್ರತಿಷ್ಠಿತ ಜಾನ್ ಔಬುಚೊನ್ ಪ್ರೆಸ್ ಫ್ರೀಡಂ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬುಧವಾರ ನಡೆದ ಸಮಾರಂಭದಲ್ಲಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

- Advertisement -

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಭಾರತದಲ್ಲಿ ಯಾವುದೇ ಪತ್ರಿಕಾ ಸ್ವಾತಂತ್ರ್ಯವಿಲ್ಲ, ಏಕಾಂಗಿಯಾಗಿಯೇ ಹೋರಾಟ ನಡೆಸುತ್ತಿದ್ದ ತನಗೆ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದಗಳು. ಈ ಪ್ರಶಸ್ತಿಯನ್ನು ಶಿರಿನ್ ಅಬು ಅಖ್ಲೆಹ್ ಅವರಿಗೆ ಮತ್ತು ಏಕಾಂಗಿ ಹೋರಾಟ ನಡೆಸುತ್ತಿರುವ ಪ್ರತಿಯೊಬ್ಬ ಪತ್ರಕರ್ತನಿಗೂ ಸಮರ್ಪಿಸುತ್ತಿದ್ದೇನೆ ಎಂದು ಹೇಳಿದರು.

ಜುಲೈ 2022 ರಲ್ಲಿ ಅವರ ಹೆಸರನ್ನು ಘೋಷಿಸಿದಾಗ ಅಯೂಬ್ ಈ ಪ್ರಶಸ್ತಿಯನ್ನು ದೇಶಾದ್ಯಂತ ವಿವಿಧ ಜೈಲುಗಳಲ್ಲಿ ಕೊಳೆಯುತ್ತಿರುವ ತಮ್ಮ ಸಹೋದ್ಯೋಗಿಗಳಿಗೆ ಸಮರ್ಪಿಸುವುದಾಗಿ ತಿಳಿಸಿದ್ದರು. “ಇದನ್ನು ನನ್ನ ಸಹೋದ್ಯೋಗಿಗಳಾದ ಮುಹಮ್ಮದ್ ಝುಬೇರ್, ಸಿದ್ದಿಕ್ ಕಾಪ್ಪನ್ ಮತ್ತು ಆಸಿಫ್ ಸುಲ್ತಾನ್ ಅವರಿಗೆ ಸಮರ್ಪಿಸುತ್ತೇನೆ” ಎಂದು ಅವರು ಹೇಳಿದ್ದರು.



Join Whatsapp