ಕಾಬೂಲ್: ಆಘಾತಕಾರಿ ಸುದ್ದಿ ದೊರೆತಿದ್ದು, ಮಾಸ್ಕೋಗೆ ತೆರಳುತ್ತಿದ್ದ ಭಾರತೀಯ ವಿಮಾನವು ಅಫ್ಘಾನಿಸ್ತಾನದ ಬಡಾಕ್ಷನ್ನ ವಖಾನ್ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿವೆ.
ಅಫ್ಘಾನಿಸ್ತಾನದ ಬಡಾಕ್ಷನ್ ಪ್ರಾಂತ್ಯದಲ್ಲಿ ಭಾನುವಾರ ಪ್ರಯಾಣಿಕರ ವಿಮಾನ ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ.
ಮಾಸ್ಕೋಗೆ ತೆರಳುತ್ತಿದ್ದ ಭಾರತೀಯ ವಿಮಾನವು ಬಡಾಕ್ಷನ್‌ನ ವಖಾನ್ ಪ್ರದೇಶದಲ್ಲಿ ಶನಿವಾರ ಅಪಘಾತಕ್ಕೀಡಾಗಿದೆ ಎಂದು ಅಫ್ಘಾನಿಸ್ತಾನದ ಮಾಧ್ಯಮ ವರದಿಗಳು ತಿಳಿಸಿವೆ. ಬಡಾಕ್ಷನ್‌ನಲ್ಲಿರುವ ತಾಲಿಬಾನ್‌ನ ಮಾಹಿತಿ ಮತ್ತು ಸಂಸ್ಕೃತಿ ಮುಖ್ಯಸ್ಥರು ಈ ಘಟನೆಯನ್ನು ದೃಢಪಡಿಸಿದ್ದು, ಪ್ರಾಂತ್ಯದ ಕರಣ್, ಮಂಜನ್ ಮತ್ತು ಜಿಬಕ್ ಜಿಲ್ಲೆಗಳನ್ನು ಒಳಗೊಂಡ ಟೋಪ್ಖಾನೆ ಪರ್ವತದಲ್ಲಿ ಪ್ರಯಾಣಿಕರ ವಿಮಾನ ಅಪಘಾತಕ್ಕೀಡಾಗಿದೆ ಎಂದು ಹೇಳಿದ್ದಾರೆ.
ಘಟನೆಯ ಬಗ್ಗೆ ತನಿಖೆ ನಡೆಸಲು ತಂಡವನ್ನು ಈ ಪ್ರದೇಶಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಸಾವುನೋವುಗಳು ಅಥವಾ ಅಪಘಾತದ ಕಾರಣದ ಬಗ್ಗೆ ಮಾಹಿತಿ ನೀಡಲಾಗಿಲ್ಲ.
ಭಾರತದ ಯಾವುದೇ ಸಾಮಾನ್ಯ ವಿಮಾನಗಳು ಆ ಮಾರ್ಗದಲ್ಲಿ ಹಾರುವುದಿಲ್ಲ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಇದು ಖಾಸಗಿ ವಿಮಾನವೇ ಅಥವಾ ಚಾರ್ಟರ್ಡ್ ವಿಮಾನವೇ ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.