ಬೆಂಗಳೂರು ಮೂಲದ ‘ಬೈಜೂಸ್’ ತೆಕ್ಕೆಗೆ ಪ್ರತಿಷ್ಠಿತ ಕತಾರ್ ಫುಟ್ಬಾಲ್ ವಿಶ್ವಕಪ್ ಪ್ರಾಯೋಜಕತ್ವ

Prasthutha|

ಬೆಂಗಳೂರು: ಆನ್‌’ಲೈನ್‌ ಶಿಕ್ಷಣ ವಲಯದ ದಿಗ್ಗಜ, ಬೆಂಗಳೂರು ಮೂಲದ ಬೈಜೂಸ್‌ ಸಂಸ್ಥೆ, ಇದೇ ವರ್ಷಾಂತ್ಯದಲ್ಲಿ ನಡೆಯಲಿರುವ ಪ್ರತಿಷ್ಠಿತ ಕತಾರ್ ಫುಟ್ಬಾಲ್ ವಿಶ್ವಕಪ್ ಅಧಿಕೃತ ಪ್ರಾಯೋಜಕತ್ವವನ್ನು ವಹಿಸಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬೈಜೂಸ್‌ ಸಂಸ್ಥಾಪಕ ಮತ್ತು ಸಿಇಒ ಬೈಜು ರವೀಂದ್ರನ್, ‘ಪ್ರತಿಷ್ಠಿತ ಜಾಗತಿಕ ವೇದಿಕೆಯಲ್ಲಿ ಭಾರತವನ್ನ ಪ್ರತಿನಿಧಿಸುವುದು ಮತ್ತು ಶಿಕ್ಷಣ ಮತ್ತು ಕ್ರೀಡೆಯ ಏಕೀಕರಣವನ್ನ ಎತ್ತಿಹಿಡಿಯುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಕ್ರೀಡೆಯು ಜೀವನದ ಭಾಗವಾಗಿದ್ದು, ಜಗತ್ತಿನಾದ್ಯಂತ ಜನರನ್ನು ಒಂದುಗೂಡಿಸುತ್ತದೆ’
ಎಂದು ಹೇಳಿದ್ದಾರೆ.

- Advertisement -

ಈಗಾಗಲೇ ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕರಾಗಿರುವ ಬೈಜೂಸ್, ಕತಾರ್ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಪ್ರಾಯೋಜಕತ್ವ ಪಡೆಯುವ ಮೂಲಕ, ಫಿಫಾ ವಿಶ್ವ ಕಪ್’ ನ ಲೋಗೋ, ಬ್ಯಾಡ್ಜ್’ಗಳನ್ನು ತನ್ನ ಬ್ರ್ಯಾಂಡ್’ನ ಪ್ರಚಾರದಲ್ಲಿ ಬಳಸುವ ಅವಕಾಶ ಪಡೆದಿದೆ.
2022ರ ಫಿಫಾ ವಿಶ್ವಕಪ್ ನವೆಂಬರ್ 21ರಿಂದ ಡಿಸೆಂಬರ್ 12ರವರೆಗೆ ಕತಾರ್’ನಲ್ಲಿ ನಡೆಯಲಿದೆ.
1.2 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ, ಬೈಜೂಸ್, ಬೆಂಗಳೂರಿನಲ್ಲಿ ಮುಖ್ಯ ಕಚೇರಿಯನ್ನು ಹೊಂದಿದ್ದು, 21 ದೇಶಗಳಲ್ಲಿ ಕಚೇರಿಗಳನ್ನು ಹಾಗೂ 120ಕ್ಕೂ ಅಧಿಕ ದೇಶಗಳಲ್ಲಿ ಕಾರ್ಯವ್ಯಾಪ್ತಿ ವಿಸ್ತಾರಗೊಂಡಿದೆ.



Join Whatsapp