ಬೋರ್ ವೆಲ್ ಗೆ ಬಿದ್ದ 18 ತಿಂಗಳ ಮಗುವನ್ನು ರಕ್ಷಿಸಿದ ಭಾರತೀಯ ಸೇನೆ

Prasthutha|

ನವದೆಹಲಿ: ಸುರೇಂದ್ರನಗರ ತಾಲೂಕಿನ ದುದಾಪುರ ಗ್ರಾಮದಲ್ಲಿ ಬೋರ್ ವೆಲ್ ಗೆ ಬಿದ್ದ 18 ತಿಂಗಳ ಮಗುವನ್ನುಭಾರತೀಯ ಸೇನೆಯ ಸಿಬ್ಬಂದಿ ಸಾಹಸಮಾಯ ರೀತಿಯಲ್ಲಿ ರಕ್ಷಿಸಿದ್ದಾರೆ.

- Advertisement -

ಮಂಗಳವಾರ ತಡರಾತ್ರಿ ಮಗು ಬೋರ್ ವೆಲ್ ಗೆ ಬಿದ್ದಿತ್ತು. ಇದಾದ ನಂತರ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಧ್ರಂಗಧ್ರ ಶಿವಂ ವರ್ಮಾ ಅವರು ಪ್ರದೇಶದ ಮಿಲಿಟರಿ ಠಾಣೆಗೆ ಕರೆ ಮಾಡಿ, ಶಿವಂ ಎಂಬ ಮಗುವನ್ನು ರಕ್ಷಿಸುವಂತೆ ಮನವಿ ಮಾಡಿದರು. ಬೋರ್ ವೆಲ್ನಿಂದ 18 ತಿಂಗಳ ಮಗುವನ್ನು ರಕ್ಷಿಸಿದ ಸೇನೆಯ ಕ್ಯಾಪ್ಟನ್ ಸೌರವ್ ನೇತೃತ್ವದ ಗೋಲ್ಡನ್ ಕಟಾರ್ ಗನ್ನರ್ಸ್, 10 ನಿಮಿಷಗಳಲ್ಲಿ ಮನಿಲಾ ರೋಪ್, ಸರ್ಚ್ ಲೈಟ್ ಗಳು, ಸುರಕ್ಷತಾ ಸರಂಜಾಮು ಮತ್ತು ಕ್ಯಾರಬೈನರ್ ನಂತಹ ಅಗತ್ಯ ಉಪಕರಣಗಳೊಂದಿಗೆ ಲಘು ವಾಹನದಲ್ಲಿ ಸ್ಥಳಕ್ಕೆ ಧಾವಿಸಿದರು. ನೆಲಮಟ್ಟದಿಂದ ಸುಮಾರು 20ರಿಂದ 25 ಅಡಿಗಳಷ್ಟು ಕೆಳಗೆ ಸಿಲುಕಿಕೊಂಡಿದ್ದ ಶಿವಂ ಎಂಬ ಮಗುವನ್ನು ತಂಡವು ನಿಧಾನವಾಗಿ ಮೇಲಕ್ಕೆ ಎಳೆದಿದೆ. ಮಗುವನ್ನು ನಿಧಾನವಾಗಿ ಬೋರ್ವೆಲ್ನಿಂದ ರಕ್ಷಿಸಲಾಯಿತು ಎಂದು ರಕ್ಷಣಾ ಸಚಿವಾಲಯ ಟ್ವಿಟರ್ನಲ್ಲಿ ಮಾಹಿತಿ ನೀಡಿದೆ. ರಕ್ಷಣಾ ಕಾರ್ಯಾಚರಣೆಯ ವೀಡಿಯೋವನ್ನೂ ಕೂಡ ಸಚಿವಾಲಯ ಹಂಚಿಕೊಂಡಿದೆ.



Join Whatsapp