ಪಾಕ್ ಡ್ರೋನ್ ಉರುಳಿಸುವ ಯೋಧರಿಗೆ 1 ಲಕ್ಷ ಬಹುಮಾನ ಘೋಷಿಸಿದ ಭಾರತೀಯ ಸೇನೆ

Prasthutha|

ನವದೆಹಲಿ: ಪಾಕ್ ಡ್ರೋನ್ ಹೊಡೆದು ಉರುಳಿಸುವ ಯೋಧರಿಗೆ 1 ಲಕ್ಷ ಬಹುಮಾನವನ್ನು ಭಾರತೀಯ ಸೇನೆ ಘೋಷಿಸಿದೆ.

- Advertisement -

ಭಾರತ-ಪಾಕಿಸ್ತಾನದ ಗಡಿಯಲ್ಲಿ ಪಾಕ್ ಡ್ರೋನ್ ಹೊಡೆದುರುಳಿಸುವ ಗಡಿ ಭದ್ರತಾ ಪಡೆ(BSF) ತಂಡಕ್ಕೆ ಭಾರತೀಯ ಸೇನೆಯು ಒಂದು ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದು, ಪಾಕಿಸ್ತಾನದಿಂದ ಡ್ರೋನ್ ಗಳ ಮೂಲಕ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳು ಸಾಗಿಸುತ್ತಿರುವ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಈ ಕ್ರಮ ಕೈಗೊಂಡಿದೆ.

ಗಡಿಯಲ್ಲಿ ಜಾಮರ್ಗಳನ್ನು, ಸ್ಪೂಫರ್ಗಳನ್ನು ಅಳವಡಿಸಲು ಹಾಗೂ ಗಸ್ತು ಹೆಚ್ಚಿಸಲು ಭಾರತೀಯ ಸೇನೆ ಮುಂದಾಗಿದೆ.

Join Whatsapp