ಅಮೆರಿಕದ ಕಾರ್ಯಕ್ರಮದಲ್ಲಿ ಸಾಧ್ವಿ ಋತಂಭರ ಭಾಗಿ: ಭಾರತೀಯ – ಅಮೆರಿಕನ್ ಸರ್ವಧರ್ಮೀಯ ವೇದಿಕೆಯಿಂದ ಪ್ರತಿಭಟನೆ

Prasthutha|

ಅಮೆರಿಕ: ಅಮೆರಿಕದ ನ್ಯೂಜೆರ್ಸಿಯ ಪ್ರಾಂತ್ಯದ ರಿಡ್ಜ್’ವುಡ್’ನಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಘಪರಿವಾರದ ಮುಖಂಡೆ ಸಾಧ್ವಿ ಋತಂಭರ ಭಾಗವಹಿಸುತ್ತಿರುವುದನ್ನು ವಿರೋಧಿಸಿ ಭಾರತೀಯ ಅಮೆರಿಕನ್ ಸಮುದಾಯ, ಸರ್ವಧರ್ಮೀಯರ ಗುಂಪು ಮತ್ತು ನಾಗರಿಕ ಸಮಾಜದ ಸಂಘಟನೆಗಳ ಒಕ್ಕೂಟದ ಸಂಯೋಗವು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

- Advertisement -

ಸಾಧ್ವಿ ಋತಂಭರ ಅವರು ದ್ವೇಷಪೂರಿತ ಭಾಷಣಕ್ಕೆ ಕುಖ್ಯಾತಿ ಹೊಂದಿದ್ದು, ಇವರ ಭಾಷಣದಿಂದಾಗಿ ಭಾರತದ ವಿವಿಧ ರಾಜ್ಯಗಳಲ್ಲಿ ಮುಸ್ಲಿಮ್ ವಿರೋಧಿ ಹಿಂಸಾಚಾರ ಭುಗಿಲೆದ್ದಿದೆ ಎಂದು ಭಾರತೀಯ ಅಮೆರಿಕನ್ ಮುಸ್ಲಿಮ್ ಕೌನ್ಸಿಲ್ (IAMC) ಸಂಸ್ಥೆ ಪತ್ರಿಕಾ ಪ್ರಕಟನೆಯಲ್ಲಿ ಹೇಳಿದೆ.

1992ರಲ್ಲಿ ಬಾಬರಿ ಮಸೀದಿಯನು ಧ್ವಂಸಗೊಳಿಸಲು ಸಂಘಪರಿವಾರದ ಕಾರ್ಯಕರ್ತರನ್ನು ಪ್ರಚೋದಿಸಿದ ತೀವ್ರಗಾಮಿ ನಾಯಕರಲ್ಲಿ ಸಾಧ್ವಿ ಋತಂಭರ ಕೂಡ ಒಬ್ಬರೆಂದು ಭಾರತೀಯ ಅಮೆರಿಕನ್ ಮುಸ್ಲಿಮ್ ಕೌನ್ಸಿಲ್ (IAMC) ಸಂಸ್ಥೆ ಅಭಿಪ್ರಾಯಪಟ್ಟಿದೆ.

- Advertisement -

ಬಾಬರಿ ಮಸೀದಿ ಧ್ವಂಸಕ್ಕೆ ಕಾರಣವಾದ 68 ವ್ಯಕ್ತಿಗಳಲ್ಲಿ ಸಾಧ್ವಿ ಋತಂಭರ ಒಬ್ಬರೆಂದು ಭಾರತ ಸರ್ಕಾರ ನೇಮಿಸಿದ ಲಿಬರ್ಹಾನ್ ಆಯೋಗದ ವರದಿಯಲ್ಲಿ ದೋಷಾರೋಪಣೆ ಮಾಡಿದೆ ಎಂದು IAMC ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕ್ರಿಶ್ಚಿಯನ್ನರ ಮೇಲೆ ದಾಳಿ ಮಾಡುವಂತೆ ಪ್ರಚೋದನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 1995, ಎಪ್ರಿಲ್ ನಲ್ಲಿ ಸಾಧ್ವಿ ಋತಂಭರಾ ಅವರನ್ನು ಬಂಧಿಸಲಾಗಿದೆ ಮತ್ತು ಮದರ್ ತೆರೇಸಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಸಾಧ್ವಿ ಋತಂಭರಾ ಅವರ ಪ್ರಚೋದನಕಾರಿ ಹೇಳಿಕೆಯಿಂದಾಗಿ ಕ್ರಿಶ್ಚಿಯನ್ ಮತ್ತು ಮುಸ್ಲಿಮರ ವಿರುದ್ಧ ಹಿಂಸಾಚಾರ ಏರ್ಪಟ್ಟಿದೆ ಎಂದು IAMC ತಿಳಿಸಿದೆ.

Join Whatsapp