ಕರ್ನಾಟಕದಲ್ಲಿ ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ನಿರಾಕರಣೆ: ಅಮೆರಿಕಾದ ವಿವಿಧ ನಗರಗಳಲ್ಲಿ ಪ್ರತಿಭಟನಾ ಮೆರವಣಿಗೆ

Prasthutha|

ಕರ್ನಾಟಕದ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ಧರಿಸಲು‌ ನಿರಾಕರಿಸುತ್ತಿರುವ ವಿಚಾರವು ಜಾಗತಿಕವಾಗಿ ಖಂಡನೆಗೆ ಒಳಗಾಗುತ್ತಿರುವ ನಡುವೆಯೇ ಅಮೆರಿಕದ ವಿವಿಧ ನಗರಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ.
ಇಂಡಿಯನ್-ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಸಂಘಟನೆಯು ನ್ಯೂಜೆರ್ಸಿ, ಮಿಚಿಗನ್, ನಾರ್ತ್ ಕರೋಲಿನಾ ಸೇರಿದಂತೆ ವಿವಿಧ ನಗರಗಳಲ್ಲಿ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು, ಮಕ್ಕಳು, ಭಾರತೀಯ ಮೂಲದವರು, ಸ್ಥಳೀಯರು ಭಾಗವಹಿಸಿದ್ದರು.

- Advertisement -

‘ಭಾರತದಲ್ಲಿ ಇಸ್ಲಾಮೋಫೋಬಿಯಾವನ್ನು ನಿಲ್ಲಿಸಿ, ಹಿಜಾಬ್ ನನ್ನ ಹಕ್ಕು- ನನ್ನ ಆಯ್ಕೆ, ಹಿಜಾಬ್ ನನ್ನ ನಂಬಿಕೆ, ಹಿಜಾಬ್ ನನ್ನ ಗುರುತು, ಮಹಿಳೆಯರು ಏನು ಮಾಡಬೇಕು ಎಂದು ಹೇಳುವುದನ್ನು ನಿಲ್ಲಿಸಿ, ಭಾರತದ ಮುಸ್ಲಿಂ ಮಹಿಳೆಯರ ಹಕ್ಕುಗಳಿಗಾಗಿ ನ್ಯೂ ಜೆರ್ಸಿಯ ಬೆಂಬಲ, ಭಾರತದಲ್ಲಿ ಹಿಜಾಬ್ ನಿಷೇಧಿಸುವುದು ವರ್ಣಭೇದ ನೀತಿಯಾಗಿದೆ, ನನ್ನ ದೇಹ -ನನ್ನ ಹಕ್ಕು’ ಎಂದು ಬರೆದ ಪೋಸ್ಟರ್’ಗಳನ್ನು ಹಿಡಿದು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Join Whatsapp