ಬಾಂಗ್ಲಾದೇಶ ವಿರುದ್ಧ 50 ರನ್‌ಗಳ ಜಯ ಸಾಧಿಸಿದ ಭಾರತ

Prasthutha|

ಆಂಟಿಗುವಾ: ಬಾಂಗ್ಲಾದೇಶ ವಿರುದ್ಧ ಭಾರತ ಸೂಪರ್‌-8 ಪಂದ್ಯದಲ್ಲಿ 50 ರನ್ ಗಳ ಭರ್ಜರಿ ಜಯ ಸಾಧಿಸಿದೆ.

- Advertisement -

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 5 ವಿಕೆಟಿಗೆ 196 ರನ್‌ ಕಲೆ ಹಾಕಿತ್ತು. ಹಾರ್ದಿಕ್‌ ಪಾಂಡ್ಯ ಅಜೇಯ ಅರ್ಧ ಶತಕದ ಮೂಲಕ ತಂಡದ ಈ ಮೊತ್ತಕ್ಕೆ ದೊಡ್ಡ ಕೊಡುಗೆ ನೀಡಿದರು. ರೋಹಿತ್‌ ಶರ್ಮ- ವಿರಾಟ್‌ ಕೊಹ್ಲಿ 3.4 ಓವರ್‌ಗಳಿಂದ 39 ರನ್‌ ಪೇರಿಸಿದರು. ಇದು ಈ ವಿಶ್ವಕಪ್‌ನಲ್ಲಿ ಭಾರತದ ಆರಂಭಿಕ ವಿಕೆಟಿಗೆ ಒಟ್ಟುಗೂಡಿದ ಅತ್ಯಧಿಕ ಮೊತ್ತ.

37 ರನ್‌ ಮಾಡಿದ ವಿರಾಟ್‌ ಕೊಹ್ಲಿ ವಿಶ್ವಕಪ್‌‌ನಲ್ಲಿ (ಟಿ20 ಪ್ಲಸ್‌ ಏಕದಿನ) 3 ಸಾವಿರ ರನ್‌ ಪೂರೈ ಸಿದ ಪ್ರಥಮ ಕ್ರಿಕೆಟಿಗನೆನಿಸಿದರು. ಇವರನ್ನು ತಾಂಜಿಮ್‌ ಹಸನ್‌ ಬೌಲ್ಡ್‌ ಮಾಡಿದರು. 11 ಎಸೆತಗಳಿಂದ 23 ರನ್‌ ಹೊಡೆದ ರೋಹಿತ್‌ ಶಕಿಬ್‌ ಎಸೆತಕ್ಕೆ ಪೆವಿಲಿಯನ್‌ ಹಾದಿ ಹಿಡಿದರು. ಇದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ 50ನೇ ವಿಕೆಟ್‌ ಉರುಳಿಸಿದ ಮೊದಲ ಬೌಲರ್‌ ಎಂಬ ದಾಖಲೆ ಶಕಿಬ್‌ ಅವರದ್ದಾಯಿತು.

- Advertisement -

ಭಾರತ ನೀಡಿದ ಗುರಿ ಬೆನ್ನಟ್ಟಿದ ಬಾಂಗ್ಲಾಕ್ಕೆ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಗೆಲುವಿನ ಮೂಲಕ ಭಾರತದ ಸೆಮಿ ಫೈನಲ್ ಹಾದಿ ಈಗ ಸುಲಭವಾಗಿದೆ.ಭಾನುವಾರ ಅಘಾನಿಸ್ತಾನ ಎದುರು ಆಸ್ಟ್ರೇಲಿಯಾ ಗೆಲುವು ದಾಖಲಿಸಿದರೆ, ಟೀಮ್ ಇಂಡಿಯಾ ಸೆಮೀಸ್ ಸ್ಥಾನ ಖಾತ್ರಿಯಾಗಲಿದೆ.

ಸೂಪರ್‌-8ನ ಕೊನೆಯ ಮತ್ತೊಂದು ಪಂದ್ಯದಲ್ಲಿ ಜೂನ್ 24 ರಂದು ಭಾರತ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರ್‌

ಭಾರತ-5 ವಿಕೆಟಿಗೆ 196

ರೋಹಿತ್‌ 23, ಕೊಹ್ಲಿ 37, ಪಂತ್‌ 36, ಸೂರ್ಯ 6, ದುಬೆ 34, ಪಾಂಡ್ಯ ಔಟಾಗದೆ 50, (ತಾಂಜಿಮ್‌ 32ಕ್ಕೆ 2, ರಿಶಾದ್‌ 43ಕ್ಕೆ 2)

ಬಾಂಗ್ಲಾದೇಶ 8 ವಿಕೆಟಿಗೆ 146

ತಂಜಿದ್ ಹಸನ್ 29, ನಜ್ಮುಲ್ ಹೊಸೈನ್ ಶಾಂಟೊ 40, ರಿಶಾದ್ ಹೊಸೈನ್ 24 (ಕುಲದೀಪ್ ಯಾದವ್ 19ಕ್ಕೆ 3, ಬುಮ್ರಾ 13ಕ್ಕೆ 2, ಅರ್ಶದೀಪ್ ಸಿಂಗ್ 30ಕ್ಕೆ 2)



Join Whatsapp