ಬಾಂಗ್ಲಾ ವಿರುದ್ಧ 44 ರನ್‌ಗಳಿಂದ ಜಯಿಸಿದ ಭಾರತ ಮಹಿಳೆಯರ ತಂಡ

Prasthutha|

ಬಾಂಗ್ಲಾದೇಶ: ಟಿ20 ಪಂದ್ಯದಲ್ಲಿ ರೇಣುಕಾ ಸಿಂಗ್ (18ಕ್ಕೆ3) ಮತ್ತು ಪೂಜಾ ವಸ್ತ್ರಾಕರ್‌ (25ಕ್ಕೆ2) ಅವರ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ಮಹಿಳೆಯರ ತಂಡ ಬಾಂಗ್ಲಾ ವಿರುದ್ಧ 44 ರನ್‌ಗಳಿಂದ ಜಯಿಸಿದೆ.

- Advertisement -

ಶಫಾಲಿ ವರ್ಮಾ (31, 22ಎಸೆತ) ಮತ್ತು ಯಷ್ಟಿಕಾ ಭಾಟಿಯಾ (36, 29ಎಸೆತ) ಅವರ ಬ್ಯಾಟಿಂಗ್‌ನಿಂದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ ಗಳಿಗೆ 145 ರನ್ ಗಳಿಸಿತು.

ಈ ಗುರಿ ಬೆನ್ನಟ್ಟಿದ ಆತಿಥೇಯ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 101 ಗಳಿಸಲಷ್ಟೇ ಸಾಧ್ಯವಾಯಿತು.

- Advertisement -

ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 145 (ಶೆಫಾಲಿ ವರ್ಮಾ 31, ಯಷ್ಟಿಕಾ ಭಾಟಿಯಾ 36, ರಬೆಯಾ ಖಾನ್ 23ಕ್ಕೆ3) ರನ್ ಗಳಿಸುದರೆ, ಬಾಂಗ್ಲಾದೇಶ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 101 (ನಿಜರ್ ಸುಲ್ತಾನಾ ಔಟಾಗದೆ 51, ರೇಣುಕಾ ಸಿಂಗ್ 18ಕ್ಕೆ3, ಪೂಜಾ ವಸ್ತ್ರಾಕರ್ 25ಕ್ಕೆ2) ರನ್ ಅಷ್ಟೇ ಗಳಿಸಿತು. ಹಾಗಾಗಿ ಭಾರತಕ್ಕೆ 44 ರನ್‌ಗಳ ಜಯ ದಾಖಲಾಯಿತು.

Join Whatsapp