ವಿಶ್ವಕಪ್‌‌ನಲ್ಲಿ ಸೋತ ಭಾರತಕ್ಕೆ ಆಸೀಸ್‌ ವಿರುದ್ಧ ಟಿ20 ಸರಣಿ ಜಯ

Prasthutha|

ರಾಯ್‌ಪುರ: ಕಳೆದ ತಿಂಗಳಲ್ಲಿ ನಡೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತೀಯರಿಗೆ ತೀವ್ರ ನಿರಾಸೆ ನೀಡಿ ಭಾರತವನ್ನು ಸೋಲಿಸಿದ ಅದೇ ಆಸೀಸ್‌ ತಂಡವನ್ನು ಭಾರತ ತಂಡ ಸೋಲಿಸಿ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟ್ರೊಫಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದು ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಒಂದಷ್ಟು ಸಮಾಧಾನ ತಂದುಕೊಟ್ಟಿದೆ.

- Advertisement -

ಶುಕ್ರವಾರ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 20 ರನ್‌ಗಳಿಂದ ಆಸೀಸ್‌ ತಂಡವನ್ನು ಸೋಲಿಸುವ ಮೂಲಕ ವ ವಿಶ್ವಕಪ್‌ನಲ್ಲಿ ಆದ ಗಾಯಕ್ಕೆ ತಕ್ಕ ಮಟ್ಟಿಗೆ ಮುಲಾಮು ಹಚ್ಚಿಕೊಂಡಿದೆ.

ಆಸ್ಟ್ರೇಲಿಯ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು.ಆಸೀಸ್ ಗೆ ಕೊನೆಯ 12 ಎಸೆತಗಳಲ್ಲಿ 40 ರನ್ ಅಗತ್ಯವಿತ್ತು.ಕೊನೆಯ ಎರಡು ಓವರ್ ಎಸೆದ ಮುಖೇಶ್ ಕುಮಾರ್ 9 ರನ್ , ಆವೇಶ್ ಖಾನ್ 10 ರನ್ ಮಾತ್ರ ಬಿಟ್ಟು ಕೊಟ್ಟರು.

- Advertisement -

ವಿಶ್ವಕಪ್ ಪಂದ್ಯದ ಸೋಲಿನ ಬಳಿಕ ಸೂರ್ಯಕುಮಾರ್ ಯಾದವ್ ಅವರ ನಾಯಕತ್ವಕ್ಕೆ ಸವಾಲೆನಿಸಿದ್ದ ಆಸೀಸ್ ಸರಣಿಯಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿ ಸಂಭ್ರಮಿಸಿದೆ. ಸರಣಿಯನ್ನು 3-1 ಅಂತರದಿಂದ ಜಯಿಸಿದೆ. ಇನ್ನೊಂದು ಪಂದ್ಯ ಬಾಕಿ ಉಳಿದಿದೆ.

ಬೌಲಿಂಗ್ ನಲ್ಲಿ ಮಿಂಚಿದ ಅಕ್ಷರ್ ಪಟೇಲ್ 4 ಓವರ್ ಗೆ 16 ರನ್ ಮಾತ್ರ ನೀಡಿ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು. ರವಿ ಬಿಷ್ಣೋಯಿ 4ಓವರ್ ಗೆ17 ರನ್ ಮಾತ್ರ ನೀಡಿ 1 ವಿಕೆಟ್ ಪಡೆದರು. ದೀಪಕ್ ಚಹಾರ್ 2 ಮತ್ತು ಆವೇಶ್ ಖಾನ್ 1 ವಿಕೆಟ್ ಪಡೆದರು.



Join Whatsapp