ಜನತ್ತಿನಲ್ಲಿ ವ್ಯರ್ಥವಾಗುತ್ತಿರುವ ಆಹಾರ ಎಷ್ಟು ಗೊತ್ತೇ । ವಿಶ್ವಸಂಸ್ಥೆ ಹೊರಬಿಟ್ಟ ಅಚ್ಚರಿಯ ಅಂಕಿಅಂಶ

Prasthutha|

- Advertisement -

ವಿಶ್ವಸಂಸ್ಥೆಯ ಸಮೀಕ್ಷೆ ಪ್ರಕಾರ ದೈನಂದಿನ ಸುಮಾರು 700 ಮಿಲಿಯನ್ ಜನರು ಹಸಿವಿನಿಂದ ತತ್ತರಿಸುತ್ತಿದ್ದಾರೆ . ಇದು ಒಂದು ಕಡೆಯಾದರೆ ಜಗತ್ತಿನಲ್ಲಿ ಎಸೆಯಲ್ಪಡುತ್ತಿರುವ ಆಹಾರದ ಅಂಕಿಅಂಶವನ್ನು ವಿಶ್ವಸಂಸ್ಥೆಯು ಹೊರಬಿಟ್ಟಿದೆ. ವ್ಯರ್ಥವಾದ ಎಲ್ಲಾ ಆಹಾರವನ್ನು 40ಟನ್ನಿನ ಕಂಟೈನರ್ ಟ್ರಕ್‌ಗಳಲ್ಲಿ ತುಂಬಿಸಿ ನಿಲ್ಲಿಸಿದರೆ ಅದು ಭೂಮಿಯನ್ನು ಏಳು ಬಾರಿ ಸುತ್ತುವಷ್ಟು ಇರಲಿದೆ ಎಂಬ ಆಘಾತಕಾರಿ ಮಾಹಿತಿಯನ್ನು ವಿಶ್ವಸಂಸ್ಥೆ ಬಹಿರಂಗಪಡಿಸಿದೆ..

ಭೂಮಿಯಲ್ಲಿ ಎಸೆಯಲ್ಪಟ್ಟ ಪ್ರತೀ 121 ಕಿಲೋ ತ್ಯಾಜ್ಯದಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ ಸುಮಾರು 74 ಕಿಲೋ ಆಹಾರವನ್ನು ವಿಲೇವಾರಿ ಮಾಡಲಾಗುತ್ತದೆ. ಉತ್ಪಾದನೆ, ಸಂಗ್ರಹಣೆ ಅಥವಾ ವಿತರಣೆಯ ಸಮಯದಲ್ಲಿ ಕಳೆದುಹೋದ ಆಹಾರಕ್ಕಿಂತ ಹೆಚ್ಚಾಗಿ ಗ್ರಾಹಕ ಮಟ್ಟದಲ್ಲಿ ಆಹಾರಗಳು ವ್ಯರ್ಥವಾಗುತ್ತಿದೆ ಎನ್ನುವುದು ಈ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಇವುಗಳಲ್ಲಿ ಕಡುಬಡತನವಿರುವ 54 ದೇಶಗಳು ಕೂಡಾ ಈ ಆಹಾರ ವ್ಯರ್ಥಕ್ಕೆ ಹೊರತಾಗಿಲ್ಲ ಎನ್ನುವುದು ಆತಂಕಕಾರಿ ವಿಚಾರವಾಗಿದೆ.



Join Whatsapp