ನಿಗದಿತ ಸಮಯದಲ್ಲಿ ಆರಂಭವಾಗದ ಟಿ20 ಪಂದ್ಯ ! ಕಾರಣವೇನು ಗೊತ್ತಾ ?

Prasthutha|

ವೆಸ್ಟ್‌ ಇಂಡೀಸ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯ ನಿಗದಿತ ಅವಧಿಗಿಂತ ಎರಡು ಗಂಟೆ ತಡವಾಗಲಿದೆ. ಸೋಮವಾರ ರಾತ್ರಿ 8ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ, ರಾತ್ರಿ 10 ಗಂಟೆಗೆ ಶುರುವಾಗಲಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

- Advertisement -

ಸೋಮವಾರದ ಪಂದ್ಯ ನಿಗದಿಯಾಗಿರುವ ಸೇಂಟ್ ಕಿಟ್ಸ್‌ಗೆ,  ಟ್ರಿನಿಡಾಡ್‌ನಿಂದ ಆಗಮಿಸಿದ ತಂಡದ ಲಗೇಜ್‌ ತಲುಪಲು ವಿಳಂಬವಾಗಿದೆ. ಹೀಗಾಗಿ, ರಾತ್ರಿ 8 ಗಂಟೆ ಬದಲಾಗಿ 10 ಗಂಟೆಗೆ ಪಂದ್ಯ ಶುರುವಾಗಲಿದೆ. ಅಭಿಮಾನಿಗಳು, ಪ್ರಾಯೋಜಕರು, ಪ್ರಸಾರಕರು ಹಾಗೂ ಇತರೆ ಎಲ್ಲ ಪಾಲುದಾರರಿಗೆ ಇದರಿಂದ ಅನಾನುಕೂಲತೆ ಉಂಟಾಗಿದ್ದರೆ ವಿಷಾದಿಸುತ್ತೇವೆ ವಿಂಡೀಸ್‌ ಕ್ರಿಕೆಟ್‌ ಮಂಡಳಿ ಟ್ವೀಟ್‌ನಲ್ಲಿ ತಿಳಿಸಿದೆ.

ಮೊದಲ ಪಂದ್ಯದಲ್ಲಿ 68 ರನ್‌ಗಳ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದ್ದ ರೋಹಿತ್‌ ಶರ್ಮಾ ಬಳಗ, ಎರಡನೇ  ಪಂದ್ಯದಲ್ಲಿಯೂ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ.

- Advertisement -

ಮತ್ತೊಂದೆಡೆ ಏಕದಿನ ಸರಣಿಯಲ್ಲಿ ಹೀನಾಯ ಸೋಲು ಕಂಡಿದ್ದ ಆತಿಥೇಯ ವಿಂಡೀಸ್, ಟಿ20 ಸರಣಿಯನ್ನಾದರೂ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಚುಟುಕು ಕ್ರಿಕೆಟ್‌ಗೆ ಹೆಸರುವಾಸಿಯಾದ ಪ್ರಮುಖ ಆಟಗಾರರನ್ನು ಹೊಂದಿರುವ ವಿಂಡೀಸ್‌, ಎರಡನೇ ಟಿ20 ಪಂದ್ಯದಲ್ಲಿ ಪುಟಿದೇಳುವ ವಿಶ್ವಾಸದಲ್ಲಿದೆ.



Join Whatsapp