ಹಾಕಿ ವಿಶ್ವಕಪ್| ಗೆಲುವಿನ ಅಭಿಯಾನ ಆರಂಭಿಸಿದ ಭಾರತ

Prasthutha|

ರೂರ್ಕೆಲಾ: ಪುರುಷರ ಹಾಕಿ ವಿಶ್ವಕಪ್ ಒಡಿಶಾದಲ್ಲಿ ಆರಂಭವಾಗಿದ್ದು, ಆತಿಥೇಯ ಭಾರತ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ.

- Advertisement -

ಎರಡು ಗೋಲುಗಳಿಂದ ಸ್ಪೇನ್ ತಂಡವನ್ನು ಸೋಲಿಸಿದ ಭಾರತ ತನ್ನ ಗೆಲುವಿನ ಅಭಿಯಾನವನ್ನು ಆರಂಭಿಸಿದೆ.  ಭಾರತ ಪರ ಅಮಿತ್ ರೋಹಿದಾಸ್ ಮತ್ತು ಹಾರ್ದಿಕ್ ಸಿಂಗ್ ಗೋಲು ಗಳಿಸಿದರು.

ಇತರ ಪಂದ್ಯಗಳಲ್ಲಿ ಅರ್ಜೆಂಟೀನಾ 1-0 ಗೋಲುಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿತು. ಆಸ್ಟ್ರೇಲಿಯವು ಫ್ರಾನ್ಸ್‌ನ್ನು 8-0 ಗೋಲುಗಳಿಂದ ಸೋಲಿಸಿತು. ಇಂಗ್ಲೆಂಡ್ ವೇಲ್ಸ್ ತಂಡದ ವಿರುದ್ಧ 5-0 ಅಂತರದಲ್ಲಿ ಜಯ ಸಾಧಿಸಿದೆ. 




Join Whatsapp