ಏಷ್ಯಾಕಪ್​: ಇಂದು ಭಾರತ-ಬಾಂಗ್ಲಾದೇಶ ಮುಖಾಮುಖಿ

Prasthutha|

ಹೊಸದಿಲ್ಲಿ: ಏಷ್ಯಾಕಪ್ 2023 ಟೂರ್ನಿ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಈಗಾಗಲೇ ಫೈನಲ್ ಪಂದ್ಯ ಭಾರತ ಹಾಗೂ ಶ್ರೀಲಂಕಾ ನಡುವೆ ಎಂಬುದು ತೀರ್ಮಾನವಾಗಿದೆ. ಗುರುವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ 2 ವಿಕೆಟ್​ಗಳ ರೋಚಕ ಜಯ ಸಾಧಿಸಿ ಫೈನಲ್​ಗೆ ಲಗ್ಗೆಯಿಟ್ಟಿತು. ಇದರ ನಡುವೆ ಇಂದು ಏಷ್ಯಾಕಪ್ ಸೂಪರ್-4 ನ ಕೊನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ಶಕಿಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ ಮುಖಾಮುಖಿ ಆಗಲಿದೆ.

- Advertisement -

ಉಭಯ ತಂಡಗಳಿಗೆ ಇಂದು ಔಪಚಾರಿಕ ಪಂದ್ಯವಷ್ಟೆ. ಹೀಗಾಗಿ ಟೀಮ್ ಇಂಡಿಯಾ ದೊಡ್ಡ ಬದಲಾವಣೆಯೊಂದಿಗೆ ಕಣಕ್ಕಿಳಿಯುವುದು ಖಚಿತ. ಪ್ರಮುಖ ಹಿರಿಯ ಆಟಗಾರರು ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆ ಇದೆ. ಮುಖ್ಯವಾಗಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಇಂದಿನ ಪಂದ್ಯದಿಂದ ಹೊರಗುಳಿಯಬಹುದು. ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಮೊಹಮ್ಮದ್ ಶಮಿ ಅಥವಾ ಪ್ರಸಿದ್ಧ್ ಕೃಷ್ಟ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಫೈನಲ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಕೆಲ ಪ್ಲೇಯರ್ಸ್ ರೆಸ್ಟ್ ತೆಗೆದುಕೊಳ್ಳಲಿದ್ದಾರೆ.

Join Whatsapp