ವಿಶ್ವಸಂಸ್ಥೆ ನಿರ್ಣಯ; ರಷ್ಯಾ ಮೇಲಿನ ಒಲವು ಭಾರತದ ತಟಸ್ಥ ನೀತಿಗೆ ಕಾರಣ: ಬ್ರಿಟನ್

Prasthutha|

ಲಂಡನ್: ರಷ್ಯಾ – ಉಕ್ರೇನ್ ಸಂಘರ್ಷದ ಮಧ್ಯೆ ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧದ ನಿರ್ಣಯದ ವೇಳೆ ಭಾರತ ತಟಸ್ಥವಾಗಲು ರಷ್ಯಾ ಮೇಲಿನ ಒಲವು ಪ್ರಮುಖ ಕಾರಣ ಎಂದು ಬ್ರಿಟನ್ ವಿದೇಶಾಂಗ ಸಚಿವೆ ಲಿಝ್ಝ್ ಟ್ರಸ್ಸ್ ಆರೋಪಿಸಿದ್ದಾರೆ.

- Advertisement -

ಈ ಕುರಿತು ಸಂಸದೀಯ ಸಮಿತಿ ಸಭೆಯಲ್ಲಿ ಮಾತನಾಡಿದ ಟ್ರಸ್ಸ್, ರಕ್ಷಣಾ ವ್ಯವಸ್ಥೆ ಮತ್ತು ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಭಾರತವು ರಷ್ಯಾದೊಂದಿಗೆ ಒಲವು ಹೊಂದಿರುವುದರಿಂದ ರಷ್ಯಾ ವಿರುದ್ಧದ ವಿಶ್ವಸಂಸ್ಥೆಯ ನಿರ್ಣಯದಲ್ಲಿ ತಟಸ್ಥ ನೀತಿಯನ್ನು ಅನುಸರಿಸಿದೆ ಎಂದು ಅವರು ಬೊಟ್ಟುಮಾಡಿದ್ದಾರೆ.

ಈ ಸಂಬಂಧ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ರಷ್ಯಾ ವಿರುದ್ಧ ಮತ ಚಲಾವಣೆಗೆ ಸೂಚಿಸಿರುವುದಾಗಿ ಟ್ರಸ್ಸ್ ತಿಳಿಸಿದ್ದಾರೆ.

- Advertisement -

ಉಕ್ರೇನ್ ಮೇಲಿನ ರಷ್ಯಾ ನಡೆಸುತ್ತಿರುವ ಆಕ್ರಮಣವನ್ನು ವಿರೋಧಿಸಿ ಮಾರ್ಚ್ 2 ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ರಷ್ಯಾ ತಕ್ಷಣ ಸೇನಾ ಕಾರ್ಯಾಚರಣೆ ಸ್ಥಗಿತ, ರಾಜತಾಂತ್ರಿಕ ಮಾರ್ಗದ ಮೂಲಕ ಸಮಸ್ಯೆಯ ಶಾಂತಿಯುತ ಪರಿಹಾರ, ನಾಗರಿಕರ ರಕ್ಷಣೆ ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಅಂಗೀಕರಿಸಲಾಗಿದೆ.

ಒಟ್ಟು 193 ರಾಷ್ಟ್ರಗಳ ಪೈಕಿ 141 ರಾಷ್ಟ್ರಗಳು ಈ ನಿರ್ಣಯದ ಪರವಾಗಿದ್ದು, ರಷ್ಯಾ, ಬೆಲರೂಸ್ ಬೆಲರೂಸ್‌ ಎರಿಟ್ರಿಯಾ, ಉತ್ತರ ಕೊರಿಯಾ, ಸಿರಿಯಾ ನಿರ್ಣಯದ ವಿರುದ್ಧ ನಿಂತಿದೆ.

ಈ ಮಧ್ಯೆ ಏಷ್ಯಾದ ರಾಷ್ಟಗಳಾದ ಭಾರತ, ಚೈನಾ, ಪಾಕಿಸ್ತಾನ ರಾಷ್ಟ್ರವನ್ನು ಅಲಿಪ್ತ ನೀತಿಗೆ ಒತ್ತು ನೀಡಿದ್ದವು.

Join Whatsapp