ಭಾರತ ಧರ್ಮಾಂಧತೆ, ಧಾರ್ಮಿಕ ಪ್ರಾಬಲ್ಯದ ಬೆದರಿಕೆಯಲ್ಲಿದೆ: 37 ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದ ಸ್ವಾಲಿನ್

Prasthutha|

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಗಣರಾಜ್ಯೋತ್ಸದ ದಿನದಂದು ರಚನೆಯಾದ ಆಲ್ ಇಂಡಿಯಾ ಫೆಡರೇಶನ್ ಫಾರ್ ಸೋಶಿಯಲ್ ಜಸ್ಟೀಸ್ ಗೆ ತಮ್ಮ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದಿದ್ದು, ದೇಶವು ಮತಾಂಧತೆ, ಧಾರ್ಮಿಕ ಬೆದರಿಕೆಯಲ್ಲಿದೆ ಎಂದು ತಿಳಿಸಿದ್ದಾರೆ.

- Advertisement -

ಸಮಾನತೆ, ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇರುವವರೆಲ್ಲರೂ ಒಗ್ಗೂಡಿದರೆ ಮಾತ್ರ ಈ ಶಕ್ತಿಗಳ ವಿರುದ್ಧ ಹೋರಾಡಲು ಸಾಧ್ಯ ಎಂದು ಅವರು ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಭಾರತದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟವನ್ನು ಮುಂದಕ್ಕೆ ಕೊಂಡೊಯ್ಯಲು ಮತ್ತು ಎಲ್ಲಾ ರಾಜ್ಯಗಳು ಸಾಮಾಜಿಕ ನ್ಯಾಯದ ವೇದಿಕೆ ರಚಿಸುವಂತಾಗಲು ಏಕರೂಪವಾದ ಕಾರ್ಯಕ್ರಮವನ್ನು ಅಳವಡಿಸಬೇಕಾಗಿದೆ ಎಂದು ಅವರು ಬೊಟ್ಟು ಮಾಡಿದರು.

- Advertisement -

ಈ ಸಂಬಂಧ ಅವರು ಸೋನಿಯಾ ಗಾಂಧಿ, ಲಾಲು ಪ್ರಸಾದ್ ಯಾದವ್, ಫಾರೂಕ್ ಅಬ್ದುಲ್ಲಾ, ಶರದ್ ಪವಾರ್, ಮಮತಾ ಬ್ಯಾನರ್ಜಿ, ಡಿ ರಾಜಾ, ಸೀತಾರಾಮ್ ಯೆಚೂರಿ, ಎನ್ ಚಂದ್ರಬಾಬು ನಾಯ್ಡು, ಅರವಿಂದ್ ಕೇಜ್ರಿವಾಲ್, ಮೆಂಬೂಭಾ ಮುಫ್ತಿ, ಚಂದ್ರಶೇಖರ ರಾವ್, ಉಧವ್ ಠಾಕ್ರೆ ಮತ್ತು ಅಖಿಲೇಶ್ ಯಾದವ್, ಎಐಎಡಿಎಂಕೆ ಸಂಯೋಜಕ ಓ ಪನ್ನೀರಸೆಲ್ವಂ, ಪಿಎಂಕೆ ಸಂಸ್ಥಾಪಕ ಎಸ್ ರಾಮದಾಸ್, ವಿಸಿಕೆ ನಾಯಕ ತೋಲ್ ತಿರುಮಾವಲವನ್ ಮತ್ತು ವೈಕೊ ಸೇರಿದಂತೆ 37 ನಾಯಕರಿಗೆ ಪತ್ರ ಬರೆದಿದ್ದಾರೆ.

Join Whatsapp