ದೇಶದಲ್ಲಿ 2030ರ ಹೊತ್ತಿಗೆ 6G ನೆಟ್ವರ್ಕ್: ಪ್ರಧಾನಿ ನರೇಂದ್ರ ಮೋದಿ

Prasthutha|

- Advertisement -

ದೆಹಲಿ: ಭಾರತದಲ್ಲಿ 2030 ರ ಹೊತ್ತಿಗೆ 6G ನೆಟ್ವರ್ಕ್ ಗೆ ಚಾಲನೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಭಾರತದಲ್ಲಿ ಪ್ರಸ್ತುತ 3ಜಿ, 4ಜಿ ಸೇವೆಗಳು ಸಿಗುತ್ತಿವೆ. ಕೆಲವೇ ತಿಂಗಳುಗಳಲ್ಲಿ 5ಜಿ ಸೇವೆ ಸಿಗಲಿದೆ ಎಂದರು.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, 5ಜಿ ನೆಟ್ವರ್ಕ್ ಸಾರ್ವಜನಿಕರಿಗೆ ಲಭ್ಯವಾದರೆ ದೇಶದ ಆರ್ಥಿಕತೆಗೆ 450 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದಷ್ಟು ಸಂಪನ್ಮೂಲ ಹರಿದುಬರಲಿದೆ. 5ಜಿ ನೆಟ್ವರ್ಕ್ನಿಂದ ಕೇವಲ ಇಂಟರ್ನೆಟ್ ವೇಗ ಹೆಚ್ಚಾಗುವುದಷ್ಟೇ ಅಲ್ಲ, ಸಾಕಷ್ಟು ಹೊಸ ಉದ್ಯೋಗಾವಕಾಶಗಳೂ ಸಿಗುತ್ತವೆ’ ಎಂದು ಮೋದಿ ಹೇಳಿದರು. ಆಡಳಿತದಲ್ಲಿಯೂ ಸಕಾರಾತ್ಮಕ ಬದಲಾವಣೆ ಸಾಧ್ಯವಾಗುತ್ತದೆ. ಸಾಮಾನ್ಯ ಜನರ ಬದುಕು, ವ್ಯಾಪಾರ ಮತ್ತು ವ್ಯವಹಾರಗಳು ಸುಗಮವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

- Advertisement -

ಭಾರತದಲ್ಲಿ ಆರೋಗ್ಯಕರ ಸ್ಪರ್ಧೆಗೆ ನಾವು ಮುಕ್ತ ಅವಕಾಶ ನೀಡಿದ್ದೇವೆ. ಹೀಗಾಗಿಯೇ ಭಾರತದಲ್ಲಿ ವಿಶ್ವದಲ್ಲಿಯೇ ಅತ್ಯಂತ ಕಡಿಮೆ ದರದಲ್ಲಿ ಇಂಟರ್ನೆಟ್ ಸಿಗುತ್ತಿದೆ. 5ಜಿ ಎನ್ನುವುದು ಟಲಿಕಾಂ ವಲಯಕ್ಕೆ ಅತ್ಯಂತ ಪ್ರಮುಖ ಮೆಟ್ಟಿಲಾಗಿದೆ. ಭಾರತದ ಸ್ವಾವಲಂಬನೆಗೂ ಇದು ಅತ್ಯಗತ್ಯ ಎಂದು ಪ್ರಧಾನಿ ಹೇಳಿದರು.



Join Whatsapp