ಫೆಲೆಸ್ತೀನ್ ಗೆ ಭಾರತ ನೆರವು: 30 ಟನ್ ಔಷಧ, ಆಹಾರ ಪದಾರ್ಥಗಳ ರವಾನೆ

Prasthutha|

ನವದೆಹಲಿ: ಯುದ್ಧದಿಂದ ಜರ್ಜರಿತಗೊಂಡಿರುವ ಫೆಲೆಸ್ತೀನ್ ಗೆ ಭಾರತವು ನೆರವು ಒದಗಿಸಿದೆ.

- Advertisement -


ಫೆಲೆಸ್ತೀನ್ ಸಮಸ್ಯೆಯನ್ನು ಶಾಂತಿಯುತ ವಿಧಾನಗಳ ಮೂಲಕ ಪರಿಹರಿಸಲು ಭಾರತವು ತನ್ನ ದೃಢವಾದ ಮತ್ತು ನಿರಂತರ ಬದ್ಧತೆಯನ್ನು ಪುನರುಚ್ಚರಿಸಿದೆ.


30 ಟನ್ ಔಷಧ, ಆಹಾರ ಪದಾರ್ಥಗಳನ್ನು ರವಾನಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿಯ ಮೂಲಕ ಫೆಲೆಸ್ತೀನ್ ಗೆ ಒಟ್ಟು 30 ಟನ್ ಔಷಧ ಸಾಮಗ್ರಿಗಳು, ಆಹಾರಗಳನ್ನು ಕಳುಹಿಸಿದೆ.

- Advertisement -


ಇದರಲ್ಲಿ ಅಗತ್ಯ ಔಷಧಗಳು, ಶಸ್ತ್ರಚಿಕಿತ್ಸಾ ಸರಬರಾಜುಗಳು ಮತ್ತು ಬಿಸ್ಕತ್ತುಗಳು ಸೇರಿವೆ. ಭಾರತವು ಯುಎನ್ ಆರ್ ಡಬ್ಲ್ಯೂಎ ಮೂಲಕ ಫೆಲೆಸ್ತೀನ್ ಜನರಿಗೆ ಮಾನವೀಯ ನೆರವು ನೀಡುತ್ತಿದೆ. 30 ಟನ್ ಔಷಧಿ ಮತ್ತು ಆಹಾರ ಪದಾರ್ಥಗಳನ್ನು ಒಳಗೊಂಡ ಮೊದಲ ಹಂತದ ನೆರವು ನೀಡಲಾಗಿದೆ.


ಇಸ್ರೇಲ್ ಗಾಝಾದಲ್ಲಿನ ಆರೋಗ್ಯ ವ್ಯವಸ್ಥೆಗಳನ್ನು ಉದ್ದೇಶ ಪೂರ್ವಕವಾಗಿ ಗುರಿಯಾಗಿಸಿಕೊಂಡಿದ್ದು ಅಲ್ಲಿನ ವೈದ್ಯಕೀಯ ಸಿಬ್ಬಂದಿಗಳಿಗೆ ಚಿತ್ರಹಿಂಸೆ ನೀಡುತ್ತಿದೆ ಮತ್ತು ಅವರ ಹತ್ಯೆ ಮಾಡುತ್ತಿದೆ. ಇದು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ ಎಂದು ವಿಶ್ವಸಂಸ್ಥೆಯ ತನಿಖಾಧಿಕಾರಿಗಳು ಹೇಳಿದ್ದಾರೆ. ತುರ್ತು ವೈದ್ಯಕೀಯ ಆರೈಕೆಗಾಗಿ ಗಾಝಾದಿಂದ ಸುಮಾರು 10,000 ಜನರನ್ನು ತುರ್ತಾಗಿ ಸ್ಥಳಾಂತರಿಸುವ ಅಗತ್ಯವಿದೆ ಎಂದು ಇಸ್ರೇಲ್ ಆಕ್ರಮಿತ ಫೆಲೆಸ್ತೀನ್ ಪ್ರದೇಶಗಳಿಗೆ ಸಂಬಂಧಿಸಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ರಿಕ್ ಪೀಪರ್ಕಾರ್ನ್ ಇತ್ತೀಚೆಗೆ ಹೇಳಿದ್ದರು.



Join Whatsapp