ಹಸಿರು ಆದ್ಯತೆ ಸೂಚ್ಯಂಕದಲ್ಲಿ ಭಾರತಕ್ಕೆ ಕೊನೆಯ ಸ್ಥಾನ: ಇಪಿಐ ವರದಿ

Prasthutha|

ಹೊಸದಿಲ್ಲಿ: ಅಮೆರಿಕ ಮೂಲದ ಸಂಸ್ಥೆಗಳು ಬಿಡುಗಡೆ ಮಾಡಿರುವ ಪರಿಸರ ಆದ್ಯತೆ ಸೂಚ್ಯಂಕದಲ್ಲಿ ಭಾರತ 180 ದೇಶಗಳ ಪೈಕಿ ಕೊನೆಯ ಸ್ಥಾನದಲ್ಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಈ ರ್‍ಯಾಂಕಿಂಗ್ 40 ಆದ್ಯತಾ ಮೌಲ್ಯಮಾಪನ ಆಧರಿತವಾಗಿದ್ದು, ಹವಾಮಾನ ಬದಲಾವಣೆ, ಜೀವ ವೈವಿಧ್ಯ, ಸುಸ್ಥಿರ ಕೃಷಿ, ಪರಿಸರಾತ್ಮಕ ಸಾರ್ವಜನಿಕ ಆರೋಗ್ಯ ಹಾಗೂ ಹಸಿರುಮನೆ ಅನಿಲ ಉಗುಳುವಿಕೆಯಂತಹ ಮಾನದಂಡಗಳು ಇದರಲ್ಲಿ ಸೇರಿವೆ.

ಭಾರತದ ವಾಯುಮಾಲಿನ್ಯ ಹಾಗೂ ಕ್ಷಿಪ್ರವಾಗಿ ಹೆಚ್ಚುತ್ತಿರುವ ಹಸಿರುಮನೆ ಅನಿಲದ ಪರಿಣಾಮವಾಗಿ ಭಾರತದ ರ್‍ಯಾಂಕಿಂಗ್ ತೀವ್ರ ಕುಸಿದಿದೆ. ಯಾಲೆ ಸೆಂಟರ್ ಫಾರ್ ಎನ್ವಿರಾನ್ಮೆಂಟ್ ಲಾ ಆ್ಯಂಡ್ ಪಾಲಿಸಿ ಮತ್ತು ಕೊಲಂಬಿಯಾ ವಿವಿಯ ಸೆಂಟರ್ ಫಾರ್ ಇಂಟರ್ ನ್ಯಾಷನಲ್ ಅರ್ಥ್ ಸೈನ್ಸಸ್ ಇನ್ಫಾರ್ಮೇಷನ್ ನೆಟ್ ವರ್ಕ್ ಇನ್ಸ್ಟಿಟ್ಯೂಟ್ ನ ಸಂಶೋಧಕರು ಇಪಿಐ ವರದಿ ಬಿಡುಗಡೆ ಮಾಡಿದ್ದಾರೆ.

- Advertisement -

ನಿರ್ದಿಷ್ಟ ಪರಿಸರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಂತರ ರಾಷ್ಟ್ರೀಯವಾಗಿ ನಿರೂಪಿತ ಸುಸ್ಥಿರತೆ ಗುರಿಗಳನ್ನು ಸಾಧಿಸುವಲ್ಲಿ ದೇಶಗಳು ಎಷ್ಟು ನಿಕಟವಾಗಿವೆ ಎನ್ನುವುದನ್ನು ಈ ಸೂಚಕಗಳು ಮಾಪನ ಮಾಡುತ್ತವೆ ಎಂದು ವರದಿ ಸ್ಪಷ್ಟಪಡಿಸಿದೆ. ಭಾರತದಲ್ಲಿ ವಾಯು ಗುಣಮಟ್ಟ ಆತಂಕಕಾರಿಯಾಗಿ ಕುಸಿಯುತ್ತಿದ್ದು, ಹಸಿರುಮನೆ ಅನಿಲ ಉಗುಳುವಿಕೆ ಹೆಚ್ಚುತ್ತಿದೆ” ಎಂದು ವಿವರಿಸಲಾಗಿದೆ. 



Join Whatsapp