ಆತಿಥೇಯ ಇಂಗ್ಲೆಂಡ್ ವಿರುದ್ಧ 1-3 ಗೋಲುಗಳಿಂದ ಸೋತ ಭಾರತ ಪುರುಷರ ಹಾಕಿ ತಂಡ

Prasthutha|

ಲಂಡನ್: ಎಫ್‌ಐಎಚ್ ಪ್ರೊ ಲೀಗ್ ಹಾಕಿ ಲಂಡನ್ ಲೆಗ್‌ನ ಎರಡನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಭಾರತ ಪುರುಷರ ಹಾಕಿ ತಂಡ 1-3 ಗೋಲುಗಳಿಂದ ಸೋತಿದೆ.

- Advertisement -

ಇಂಗ್ಲೆಂಡ್ ಪರ ಬಂಡುರಾಕ್ ನಿಕೋಲಸ್ (2 ಮತ್ತು 11ನೇ ನಿಮಿಷ) ಗೋಲು ಗಳಿಸಿದರೆ, ಕ್ಯಾಲ್ನಾನ್ ವಿಲ್ 47ನೇ ನಿಮಿಷದಲ್ಲಿ ಗೋಲು ಗಳಿಸಿದರು.

ಎಫ್‌ಐಎಚ್ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್‌ಗಿಂತ ಒಂದು ಸ್ಥಾನ ಮೇಲಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ಜೂನ್ 8ರಂದು ಜರ್ಮನಿ ವಿರುದ್ಧ ಸೆಣಸಲಿದೆ.



Join Whatsapp