ವಿದೇಶಿ ಪೌರತ್ವ ಪಡೆದವರಲ್ಲಿ ಭಾರತವೇ ಟಾಪ್​!

Prasthutha|

ನವದೆಹಲಿ: ಭಾರತ ವಿಶ್ವಗುರುವಾಗುತ್ತಿದೆ ಎಂಬ ಮಿಥ್ಯೆಯನ್ನು ಅನಾವರಣಗೊಳಿಸುವಂತಹ ವರದಿಯೊಂದ ಬಹಿರಂಗವಾಗಿದೆ. ಶ್ರೀಮಂತ ದೇಶಗಳ ಪೌರತ್ವ ಗಳಿಸುವವರಲ್ಲಿ ಭಾರತೀಯರೇ ಮುಂಚೂಣಿಯಲ್ಲಿದ್ದಾರೆ ಎಂದು ‘ಅಂತಾರಾಷ್ಟ್ರೀಯ ವಲಸೆ ಮುನ್ನೋಟ: 2023′ ಶೀರ್ಷಿಕೆಯ ವರದಿ ತಿಳಿಸಿದೆ. ಕೆನಡಾದಲ್ಲಿ ಪೌರತ್ವ ನೀಡಿಕೆ ಪ್ರಮಾಣ 2021 ಮತ್ತು 2022ರ ನಡುವೆ ಶೇಕಡ 174ರಷ್ಟು ಏರಿಕೆ ದಾಖಲಾಗಿದೆ. ಇದರೊಂದಿಗೆ ವಲಸಿಗರಲ್ಲಿ ಪೌರತ್ವ ಪಡೆಯುವ ನೆಚ್ಚಿನ ತಾಣವಾಗಿ ಕೆನಡಾ ಹೊರಹೊಮ್ಮಿದೆ.

- Advertisement -

ಕಳೆದ ವರ್ಷ ಒಇಸಿಡಿ ದೇಶಗಳ ಪೌರತ್ವ ಪಡೆದವರ ಸಂಖ್ಯೆ ಒಟ್ಟು 28 ಲಕ್ಷಕ್ಕೆ ಏರಿದೆ ಎಂದು ಹೇಳಿರುವ ವರದಿ, ದೇಶವಾರು ವಿವರವನ್ನು ಒದಗಿಸಿಲ್ಲ. ಆದರೆ, 2019ರಿಂದ ಒಇಸಿಡಿ ದೇಶಗಳ ಪೌರತ್ವ ಗಳಿಸುವಲ್ಲಿ ಭಾರತ ಪ್ರಮುಖ ಮೂಲವಾಗಿರುವುದನ್ನು ಅದು ಎತ್ತಿ ತೋರಿಸಿದೆ.

1.3 ಲಕ್ಷ ಭಾರತೀಯರು 2021ರಲ್ಲಿ ಒಂದು ಒಇಸಿಡಿ ರಾಷ್ಟ್ರದ ನಾಗರಿಕತ್ವ ಪಡೆದಿದ್ದಾರೆ. 2019ರಲ್ಲಿ ಅದು 1.5 ಲಕ್ಷ ಆಗಿತ್ತು. 57,000 ಚೀನೀಯರು ಒಇಸಿಡಿ ಪೌರತ್ವ ಪಡೆಯುವುದರೊಂದಿಗೆ ಐದನೇ ಸ್ಥಾನದಲ್ಲಿದೆ.

- Advertisement -

ಅಲ್ಲದೆ, ದೇಶಗಳಿಗೆ ವಲಸೆ ಹೋಗುವಲ್ಲಿ ಮತ್ತು ವಿದೇಶಿ ಪೌರತ್ವ ಪಡೆಯುವ ದೇಶಗಳಲ್ಲಿ ಭಾರತವೇ ಮುಂಚೂಣಿಯಲ್ಲಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಇತ್ತೀಚಿನ ವರದಿಯೊಂದರಲ್ಲಿ ಹೇಳಿದೆ. ಆ ಪೈಕಿ ಅಮೆರಿಕದ ಪೌರತ್ವವೇ ಅಗ್ರಸ್ಥಾನದಲ್ಲಿದೆ ಎಂದೂ ಆ ವರದಿ ಹೇಳಿದೆ.




Join Whatsapp