ನವದೆಹಲಿ: ಜಾಗತಿಕ ಸುರಕ್ಷಿತ ದೇಶಗಳ ಪಟ್ಟಿ ಬಿಡುಗಡೆಯಾಗಿದ್ದು 122 ದೇಶಗಳಲ್ಲಿ 82 ಅಂಕ ಪಡೆದು 60ನೇ ಸ್ಥಾನದಲ್ಲಿರುವ ಭಾರತವು ಶ್ರೀಲಂಕಾ ಮತ್ತು ಪಾಕಿಸ್ತಾನಗಳಿಗಿಂತ ಹಿಂದುಳಿದಿದೆ.
ಸುರಕ್ಷಿತ ದೇಶಗಳ ಪಟ್ಟಿಯಲ್ಲಿ ಶ್ರೀಲಂಕಾ 47 ಮತ್ತು ಪಾಕಿಸ್ತಾನವು 48ನೇ ಸ್ಥಾನ ಪಡೆದಿವೆ.
ಮೊದಲ ಐದು ಸ್ಥಾನಗಳಲ್ಲಿ ಕ್ರಮವಾಗಿ ಸಿಂಗಾಪುರ, ತಾಜಕಿಸ್ತಾನ್, ನಾರ್ವೆ, ಸ್ವಿಜರ್ಲ್ಯಾಂಡ್, ಇಂಡೋನೇಶಿಯಾ ದೇಶಗಳು ಇವೆ. ಸಿಂಗಾಪುರ ಮತ್ತು ಇಂಡೋನೇಶಿಯಾದ ಪೋಲೀಸರು ಶಾಂತಿ ಕಾಪಾಡುವಲ್ಲಿ ಯಶಸ್ವಿ ಆಗುತ್ತಿರುವುದನ್ನು ವರದಿಯಲ್ಲಿ ಹೇಳಲಾಗಿದೆ.
ಕಳೆದ ಐದು ವರುಷಗಳಿಂದ ಸತತವಾಗಿ ಅಫಘಾನಿಸ್ತಾನವು ಸುರಕ್ಷಿತ ದೇಶಗಳ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ. ಈ ವರುಷ ಅದರ ಅಂಕ ಸ್ವಲ್ಪ ಆಶಾದಾಯಕ ಎನಿಸಿದರೂ ಕೊನೆಯ ಸ್ಥಾನ ಬದಲಾಗಿಲ್ಲ.