ವಾಷಿಂಗ್ಟನ್: ವಿಶ್ವದಲ್ಲಿ ನಡೆಯುತ್ತಿರುವ ಸಾಮೂಹಿಕ ಹತ್ಯೆ ಕುರಿತು ಹಾಲೊಕಾಸ್ಟ್ ಮ್ಯೂಸಿಯಂನ ಮುನ್ನೆಚ್ಚರಿಕೆ ಯೋಜನೆಯ ವರದಿಯ ಪಟ್ಟಿಯಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ಆದ್ದರಿಂದ ಭಾರತ ತನ್ನ ಮೌಲ್ಯಕ್ಕೆ ಬದ್ಧವಾಗಿರಬೇಕು ಎಂದು ವಿಶ್ವದೆಲ್ಲೆಡೆ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಿಗಾ ವಹಿಸುವ ಅಮೆರಿಕದ ವಿದೇಶಾಂಗ ಇಲಾಖೆಯ ರಾಯಭಾರಿ ರಷದ್ ಹುಸೈನ್ ಹೇಳಿದ್ದಾರೆ.
‘ನನ್ನ ತಂದೆ 1969ರಲ್ಲಿ ಭಾರತದಿಂದ ಅಮೆರಿಕಕ್ಕೆ ವಲಸೆ ಬಂದವರು. ಈ ದೇಶ ಅವರಿಗೆ ಎಲ್ಲವನ್ನೂ ನೀಡಿದೆ. ಆದರೆ, ಅವರು ಭಾರತವನ್ನು ತುಂಬಾ ಪ್ರೀತಿಸುತ್ತಾರೆ. ಭಾರತದಲ್ಲಿನ ಮೌಲ್ಯಗಳಿಗೆ ತಕ್ಕಂತೆ ಬದುಕಲು ಬಯಸುತ್ತಾರೆ. ಹೆತ್ತವರು ಮತ್ತು ನಾನು ಅಲ್ಲಿನ ಪ್ರತಿ ಬೆಳವಣಿಗೆಯ ಬಗ್ಗೆಯೂ ಚರ್ಚಿಸುತ್ತೇವೆ’ ಎಂದರು.
ಭಾರತದಲ್ಲಿ ಹಲವು ಧಾರ್ಮಿಕ ಸಮುದಾಯಗಳನ್ನು ನಡೆಸಿಕೊಳ್ಳುತ್ತಿರುವ ರೀತಿ ಅತ್ಯಂತ ಅಪಾಯಕಾರಿಯಾಗಿದೆ ಆದ್ದರಿಂದ ಈ ಸಮಸ್ಯೆಯನ್ನು ಬಗೆಹರಿಸಲು ಅಮೆರಿಕ ಮಧ್ಯಪ್ರವೇಶಿಸಬೇಕು ಎಂದು ಗುರುವಾರ ನಡೆದ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಸಭೆಯಲ್ಲಿ ಒತ್ತಾಯಿಸಿದ್ದಾರೆ