ಟಿ20 ವಿಶ್ವಕಪ್‌ | ದಕ್ಷಿಣ ಆಫ್ರಿಕಾ ಗೆಲುವಿಗೆ 134 ರನ್‌ಗಳ ಗುರಿ ನೀಡಿದ ಟೀಮ್‌ ಇಂಡಿಯಾ

Prasthutha|

ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌ 12ರ ತನ್ನ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಭಾರತ ತಂಡವನ್ನು 133 ರನ್‌ಗಳಿಗೆ ನಿಯಂತ್ರಿಸಿದೆ. 

- Advertisement -

ಲುಂಗಿ ಎನ್‌ಗಿಡಿ ಮತ್ತು ವೇಯ್ನ್ ಪಾರ್ನೆಲ್ ದಾಳಿಗೆ ಬೆದರಿದ ಭಾರತ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟದಲ್ಲಿ 133 ರನ್‌ಗಳಿಗೆ ಇನಿಂಗ್ಸ್‌ ಮುಗಿಸಿದೆ. ಒಂದು ಕಡೆಯಲ್ಲಿ ನಿರಂತರವಾಗಿ ವಿಕೆಟ್‌ ಪತನವಾಗುತ್ತಲೇ ಸಾಗಿದ್ದರೂ, ಮತ್ತೊಂದು ತುದಿಯಲ್ಲಿ ದೃಢವಾಗಿ ನಿಂತ ಸೂರ್ಯಕುಮಾರ್‌ ಯಾದವ್‌, ಆಕರ್ಷಕ ಅರ್ಧಶತಕ ಗಳಿಸಿ ಟೀಮ್‌ ಇಂಡಿಯಾದ ಮೊತ್ತವನ್ನು 100ರ ಗಡಿ ದಾಟಿಸಿದರು.

40 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್‌, 6 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 68 ರನ್‌ ಗಳಿಸಿ 19ನೇ ಓವರ್‌ನಲ್ಲಿ ಪಾರ್ನೆಲ್‌ಗೆ ವಿಕೆಟ್‌ ಒಪ್ಪಿಸಿದರು. ದಕ್ಷಿಣ ಆಫ್ರಿಕಾ ಪರ ಬೌಲಿಂಗ್‌ನಲ್ಲಿ ಎನ್‌ಗಿಡಿ 4 ಮತ್ತು ಪಾರ್ನೆಲ್ 3 ವಿಕೆಟ್‌ ಪಡೆದರು.

- Advertisement -



Join Whatsapp