ಭಾರತವು ಯುದ್ಧವನ್ನು ಮೊದಲ ಆಯ್ಕೆ ಎಂದು ಎಂದಿಗೂ ಪರಿಗಣಿಸಿಲ್ಲ : ಪ್ರಧಾನಿ ಮೋದಿ

Prasthutha|

ಕಾರ್ಗಿಲ್(ಲಡಾಖ್): ಭಾರತವು ಯುದ್ಧವನ್ನು ಎಂದಿಗೂ ಮೊದಲ ಆಯ್ಕೆ ಎಂದು ಪರಿಗಣಿಸಿಲ್ಲ. ಆದರೆ ಯಾರಾದರೂ ದೇಶದ ಮೇಲೆ ಕೆಟ್ಟ ದೃಷ್ಟಿ ಬೀರಿದರೆ, ಸಶಸ್ತ್ರ ಪಡೆಗಳು ಸೂಕ್ತ ಪ್ರತ್ಯುತ್ತರ ನೀಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

- Advertisement -

ಯೋಧರೊಂದಿಗೆ ದೀಪಾವಳಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕಾರ್ಗಿಲ್ ಗೆ ಬಂದಿಳಿದರು.

ಈ ಸಂದರ್ಭದಲ್ಲಿ  ಸೈನಿಕರನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಯುದ್ಧವನ್ನು ಮೊದಲ ಆಯ್ಕೆಯಾಗಿ ಎಂದಿಗೂ ನೋಡಿಲ್ಲ. ಅದು ಲಂಕಾದ ಯುದ್ಧವೇ ಆಗಿರಲಿ, ಯಾವುದೇ ಇರಲಿ. ನಾವು ಅದನ್ನು ಮುಂದೂಡಲು ಕೊನೆಯವರೆಗೂ ಪ್ರಯತ್ನಿಸಿದೆವು. ನಾವು ಯುದ್ಧವನ್ನು ವಿರೋಧಿಸುತ್ತೇವೆ. ಆದರೆ ಶಕ್ತಿಯಿಲ್ಲದೆ ಶಾಂತಿ ಇರಲು ಸಾಧ್ಯವಿಲ್ಲ. ಯಾರಾದರೂ ನಮ್ಮನ್ನು ದುಷ್ಟ ಕಣ್ಣುಗಳಿಂದ ನೋಡುವ ಧೈರ್ಯ ಮಾಡಿದರೆ, ನಮ್ಮ ಸಶಸ್ತ್ರ ಪಡೆಗಳು ಸೂಕ್ತ ಪ್ರತ್ಯುತ್ತರ ನೀಡುತ್ತವೆ” ಎಂದು ಹೇಳಿದರು.

- Advertisement -

ದೇಶದ ಭದ್ರತೆಗೆ ಸ್ವಾವಲಂಬನೆ ಅತ್ಯಂತ ಮುಖ್ಯ . ವಿದೇಶಿ ಶಸ್ತ್ರಾಸ್ತ್ರಗಳು ಮತ್ತು ವ್ಯವಸ್ಥೆಗಳ ಮೇಲೆ ದೇಶದ ಅವಲಂಬನೆ ಕಡಿಮೆ ಇರಬೇಕು ಎಂದು ಅವರು ಹೇಳಿದರು.



Join Whatsapp