ಬೆಂಗಳೂರು: ಆರೆಸ್ಸೆಸ್ ಅಂಗಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷ ರವೀಂದರ್ ನರೈನ್ ಸಿಂಗ್ ಅವರು ಭಾರತದ ಮುಸ್ಲಿಮರ ಬಗ್ಗೆ ನೀಡಿರುವ ಬೇಜವಾಬ್ದಾರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕರ್ನಾಟಕದ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ನ ಅಧ್ಯಕ್ಷ ಮೌಲಾನಾ ಅತೀಕುರ್ರಹ್ಮಾನ್ ಅಶ್ರಫಿ, ಭಾರತಕ್ಕೆ ಮುಸ್ಲಿಮರು ಕ್ಯಾನ್ಸರ್ ಅಲ್ಲ. ದೇಶವನ್ನು 95 ವರ್ಷಗಳಿಂದ ಗೆದ್ದಲಿನ ಹಾಗೆ ನಾಶಪಡಿಸುತ್ತಿರುವ ಸಂಘಪರಿವಾರವೇ ಭಾರತಕ್ಕೆ ಕ್ಯಾನ್ಸರ್ ಇದ್ದಂತೆ ಎಂದು ಈ ದೇಶಕ್ಕೆ ಹಲವಾರು ಘಟನೆಗಳಿಂದ ಮನವರಿಕೆಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಸಂಘಪರಿವಾರವು ಈ ದೇಶಕ್ಕೆ ಆವರಿಸಿದ ಕ್ಯಾನ್ಸರ್ ಆಗಿದೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರ ಆರ್ ಎಸ್ ಎಸ್ ಮೇಲೆ ಮೂರು ಬಾರಿ ನಿಷೇಧ ಹೇರಿತ್ತು. 1992 ರಲ್ಲಿ ಬಾಬರೀ ಮಸ್ಜಿದ್ ಹುತಾತ್ಮವಾದ ಬಳಿಕ ಕಾಂಗ್ರೆಸ್ ಮೃದು ಧೋರಣೆಯಿಂದಾಗಿ ಈ ರೋಗ ಉಲ್ಬಣಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ದೇಶದ ಹಿತೈಷಿಗಳು, ನವ ಭಾರತದ ಶಿಲ್ಪಿಗಳು ಮತ್ತು ಪ್ರಜಾಪ್ರಭುತ್ವದ ಬೆಂಬಲಿಗರು ಈ ದೇಶದ ದಲ್ಲಾಳಿ ಮತ್ತು ದೇಶದ್ರೋಹಿ ಸಂಘಪರಿವಾರದ ವಿರುದ್ಧ ಸೆಟೆದು ನಿಲ್ಲಬೇಕೆಂದು ಮೌಲಾನಾ ಅತೀಕುರ್ರಹ್ಮಾನ್ ಅಶ್ರಫಿ ಪ್ರತಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.