ಏಳು ದಶಕಗಳ ಅಳಿವಿನ ನಂತರ ಚಿರತೆಗಳನ್ನು ಸ್ವಾಗತಿಸಲು ಭಾರತ ಸಜ್ಜು

Prasthutha|

ಗ್ವಾಲಿಯರ್ : ನಮೀಬಿಯಾದಿಂದ 8 ಚಿರತೆಗಳನ್ನು ಹೊತ್ತ ಬೋಯಿಂಗ್ 747 ಚಾರ್ಟರ್ಡ್ ವಿಶೇಷ ವಿಮಾನವು ಶನಿವಾರ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿರುವ ಭಾರತೀಯ ವಾಯುಪಡೆ ನಿಲ್ದಾಣಕ್ಕೆ ಬಂದಿಳಿದಿದೆ.

- Advertisement -

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 72 ನೇ ಜನ್ಮದಿನದಂದು ಇಂದು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಚಿರತೆಗಳನ್ನು ಬಿಡುಗಡೆ ಮಾಡಿದರು.

ಏಳು ದಶಕಗಳ ನಂತರ ನಮೀಬಿಯಾದಿಂದ ಸ್ಥಳಾಂತರಗೊಂಡ ಎಂಟು ಹೊಸ ಚೀತಾಗಳನ್ನು ಸ್ವಾಗತಿಸಲು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನ ಸಜ್ಜಾಗಿದೆ. ದೇಶದ ವನ್ಯಜೀವಿಗಳು ಮತ್ತು ಆವಾಸಸ್ಥಾನವನ್ನು ಪುನರುಜ್ಜೀವನಗೊಳಿಸುವ ಮತ್ತು ವೈವಿಧ್ಯಗೊಳಿಸುವ ಪ್ರಯತ್ನಗಳ ಭಾಗವಾಗಿ ಪ್ರಧಾನಿ ಮೋದಿ ಅವರು ನಮೀಬಿಯಾದಿಂದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತಂದ ಎಂಟು ಚೀತಾಗಳನ್ನು (5 ಹೆಣ್ಣು ಮತ್ತು 3 ಗಂಡು) ಬಿಡುಗಡೆ ಮಾಡಿದರು.

- Advertisement -

ಉಪಗ್ರಹಗಳ ಮೂಲಕ ಅವನ್ನು ಗಮನಿಸಲು ಎಲ್ಲ ಚಿರತೆಗಳಿಗೂ ರೇಡಿಯೋ ಕಾಲರ್ ಅಳವಡಿಸಲಾಗಿದೆ.  ಅಲ್ಲದೆ ದಿನದ 24 ಗಂಟೆಯೂ ಆ ಚಿರತೆಗಳನ್ನು ಗಮನಿಸಲು ಪ್ರತ್ಯೇಕ ಅರಣ್ಯ ಪಡೆಯನ್ನೇ ರಚಿಸಲಾಗಿದೆ.

ಜಗತ್ತಿನ ಅತಿ ವೇಗದ ಪ್ರಾಣಿಗಳು ಮತ್ತೆ ಕುನೊ ಪಾಲ್ಪುರ ರಾಷ್ಟ್ರೀಯ ಉದ್ಯಾನದ ಮೂಲಕ ವಂಶಾಭಿವೃದ್ಧಿ ಮಾಡಲಿವೆ.

ಕಾಡಾಡಿಗಳಾಗಿ 14 ವರ್ಷ ಬಾಳುವ ಚಿರತೆಗಳು ರಕ್ಷಣೆಯಲ್ಲಿ 20 ವರ್ಷ ಬದುಕುತ್ತವೆ. ಇವು 77ರಿಂದ 143 ಪೌಂಡ್ ತೂಗುತ್ತವೆ.

ಚೀತಾಗಳು ಜಗತ್ತಿನ ನಿರ್ವಂಶದ ಅಂಚಿನಲ್ಲಿರುವ ಜೀವಿ ಎಂದು ಅಂತಾರಾಷ್ಟ್ರೀಯ ನಿಸರ್ಗ ಪಾಲನಾ ಸಮಿತಿ ಪಟ್ಟಿ ಮಾಡಿದೆ. ಅವುಗಳ ವಾಸದ ನೆಲೆ ನಾಶ, ಜನರಿಂದ ಬೇಟೆ, ಹವಾಮಾನ ಬದಲಾವಣೆ ಇವೆಲ್ಲ ಚೀತಾ ನಾಶಕ್ಕೆ ದಾರಿ ಮಾಡಿವೆ. 

ಜಿಂಕೆಗಳು, ಕೃಷ್ಣಮಗಗಳು, ಹಕ್ಕಿಗಳು, ಮೊಲಗಳು, ಹೆಗ್ಗಣದಂಥವುಗಳು ಚೀತಾಗಳ ಆಹಾರ. ಕಾಡು ಬೇಟೆಯ ಇವು ಕಾಯಿಲೆ ಬಿದ್ದಾಗ, ಮುದಿಯಾದಾಗ ಸಾಕು ಪ್ರಾಣಿಗಳನ್ನು ಬೇಟೆಯಾಡುತ್ತವೆ.

ಮೂರು ಸೆಕೆಂಡಿನಲ್ಲಿ 100 ಮೀಟರ್ ಓಡುವ ಚೀತಾಗಳು ಕಾರನ್ನು ಮೀರಿಸುತ್ತವೆ. ಆದರೆ ಆ ವೇಗವನ್ನು ಅರ್ಧ ಮಿನಿಟಿಗಿಂತ ಮೇಲೆ ಉಳಿಸಿಕೊಳ್ಳಲಾರವು ಎಂದು ದಿಲ್ಲಿಯ ಕಾಡು ಜೀವಿ ತಜ್ಞ ಕಬೀರ್ ಸಂಜಯ್ ಚೀತಾಗಳ ಬಗ್ಗೆ ಹೇಳಿದ್ದಾರೆ.

0 ವೇಗದ ಓಟಗಾರ ಚೀತಾ ಮ್ಯಾರಥಾನ್ ಓಟಗಾರ ಅಲ್ಲ. ಅದು ತನ್ನ ಬೇಟೆಯನ್ನು 30 ಸೆಕೆಂಡುಗಳ ಒಳಗೆ ಹಿಡಿಯಬೇಕು.

0 ತಡವಾದರೆ ಚೀತಾ ಆ ಬೇಟೆಯನ್ನು ಬಿಡುತ್ತದೆ. ಅದರ ಬೇಟೆಯ ಯಶಸ್ಸು 40ರಿಂದ 50%.

0 ಬೇಟೆಯನ್ನು ಹಿಡಿದರೂ ಚೀತಾ ಸುಸ್ತಾಗಿ ಕುಳಿತುಕೊಳ್ಳುತ್ತದೆ. ಆಗ ಲೆಪರ್ಡ್ (ಚಿರತೆ), ಕತ್ತೆ ಕಿರುಬ, ಕಾಡು ನಾಯಿಯಂಥವು ಚೀತಾ ಬೇಟೆಯನ್ನು ಕಸಿದು ಓಡುವುದಿದೆ.

0 ರಣಹದ್ದುಗಳು ಸಹ ಚೀತಾ ಓಡಿಸುತ್ತವೆ. ಇತರ ಕಾಡು ಬೆಕ್ಕು, ಚಿರತೆಗಳ ಶಕ್ತಿಯನ್ನು ಚೀತಾ ಹೊಂದಿಲ್ಲ.

‘ಚೀತಾ: ಭಾರತೀಯ ಜಂಗಲೋಂಕಾ ಗುಮ್ ಶೆಹಜಾದಾ’ ಕಬೀರ್ ಸಂಜಯ್ ಅವರ ಪುಸ್ತಕವಾಗಿದೆ.

0 ದೊಡ್ಡ ಶ್ವಾಸಕೋಶ, ಹೊಳ್ಳೆಗಳು ಹೆಚ್ಚು ಆಮ್ಲಜನಕ ಎಳೆದುಕೊಂಡು ಅದರ ದೇಹವನ್ನು ವೇಗಕ್ಕೆ ಹೇಳಿ ಮಾಡಿಸಿದೆ. ಹೃದಯವು ಹಾಗಾಗಿ ಬೇಗ ರಕ್ತ ಪಂಪ್ ಮಾಡುತ್ತದೆ.

0 ಇತರ ದೊಡ್ಡ ಬೆಕ್ಕುಗಳಂತಲ್ಲದೆ ಚೀತಾ ಹಗಲಿನಲ್ಲಿ ಚಟುವಟಿಕೆಯಿಂದ ಇರುತ್ತದೆ. ಬೆಳ್ಳಂಬೆಳಿಗ್ಗೆ ಮತ್ತು ಸಾಯಂಕಾಲ ಅವು ಬೇಟೆಯಾಡುತ್ತವೆ. ಬೆಳೆದ ಒಂಟಿ ಚೀತಾಗಳು ಐದು ದಿನದಲ್ಲಿ ಎರಡು ದಿನವಾದರೂ ಬೇಟೆಯಾಡುತ್ತದೆ. ಮೂರು ದಿನಕ್ಕೊಮ್ಮೆಯಾದರೂ ಅವಕ್ಕೆ ಕುಡಿಯಲು ಸಾಕಷ್ಟು ನೀರು ಸಿಗಬೇಕು.

0 ಚೀತಾಗಳ ಬೆನ್ನೆಲುಬು, ಉದ್ದ ದೇಹ ಮತ್ತು ಕಾಲುಗಳು ಓಡುವುದಕ್ಕೆ ಸಹಾಯಕವಾಗಿವೆ.

0 ಹೆಣ್ಣು ಚಿರತೆಗಳು ನಿಶ್ಚಿತ ಸಮಯದಲ್ಲಿ ಗಂಡಿನೊಡನೆ ಕೂಡುವುದು ಬಿಟ್ಟರೆ ಉಳಿದಂತೆ ತನ್ನ ಮರಿಗಳಿಗೆ ಅಂಟಿಕೊಂಡಿರುತ್ತದೆ. ಅವನ್ನು ಬೆಳೆಸಲು ಒದ್ದಾಡುತ್ತದೆ. ಗಂಡುಗಳು ಸಾಮಾನ್ಯವಾಗಿ ಒಂಟಿಗಳು. ಆದರೆ ಒಟ್ಟಿಗೆ ಹುಟ್ಟಿ ಒಟ್ಟಿಗೆ ಬೆಳೆದ ಗಂಡುಗಳು ಕೂಡಿ ಬೇಟೆಯಾಡುತ್ತ ಓಡಾಡುತ್ತವೆ.

0 ದೊಡ್ಡ ಬೆಕ್ಕುಗಳಾದ ಸಿಂಹ, ಹುಲಿ, ಲೆಪರ್ಡ್ ಚಿರತೆ, ಜಾಗ್ವಾರ್ ಚಿರತೆಗಳಂತೆ ಚೀತಾಗಳು ಗರ್ಜಿಸುವುದಿಲ್ಲ. ಅವು ಪುರ್, ಚಿರ್ಪ್, ಮೀವ್ ನಂಥ ಧ್ವನಿ ಹೊರಡಿಸಬಲ್ಲವು.



Join Whatsapp