ಇಂಡಿಯಾ ನಿಯೋಗವು ಮಣಿಪುರ ಜನರ ಕಣ್ಣೀರು ಒರೆಸಿ ಬಂದಿದೆ: ರಾಘವ್ ಚಡ್ಡಾ

Prasthutha|

ನವದೆಹಲಿ: ಇಂಡಿಯಾ ನಿಯೋಗವು ಕಲಹ ಪೀಡಿತ ಮಣಿಪುರಕ್ಕೆ ಭೇಟಿ ನೀಡಿ ”ಮಣಿಪುರದ ಜನರ ಕಣ್ಣೀರು ಒರೆಸಿದ ನಂತರ ಹಿಂತಿರುಗಿದ್ದಾರೆ” ಎಂದು ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಶ್ಲಾಘಿಸಿದ್ದಾರೆ.

- Advertisement -


ಮಣಿಪುರದ ಪರಿಸ್ಥಿತಿ ಮತ್ತು ಸಂಸತ್ತಿನ ಮುಂಗಾರು ಅಧಿವೇಶನದ ಮುಂದಿನ ಕಾರ್ಯತಂತ್ರದ ಕುರಿತು 21 ಸಂಸದ ನಿಯೋಗವು ಉಳಿದ ಪ್ರತಿಪಕ್ಷಗಳ ಸದಸ್ಯರಿಗೆ ವಿವರಿಸಲು ಸಭೆ ನಡೆಸಲಾಯಿತು. ಈ ಸಭೆಯ ಬಳಿಕ ಮಣಿಪುರದ ಬಗ್ಗೆ ಪ್ರತಿಪಕ್ಷಗಳ ಮುಂದಿನ ನಡೆಯ ಬಗ್ಗೆ ನಿಯೋಗ ತಿಳಿಸಲಿದೆ ಎಂದು ಚಾಡಾ ಹೇಳಿದರು.

”ಮಣಿಪುರದ ಜನರ ಕಣ್ಣೀರು ಒರೆಸಿದ ನಂತರ INDIAದ ನಿಯೋಗ ಮರಳಿದೆ. ಇಂದು, ಸಂಸದರು ಸಭೆಯಲ್ಲಿ ಮಣಿಪುರದ ಪರಿಸ್ಥಿತಿಯನ್ನು ವಿವರಿಸುತ್ತಾರೆ, ನಂತರ ನಾವು ಈ ನಿಟ್ಟಿನಲ್ಲಿ ನಮ್ಮ ಮುಂದಿನ ನಡೆಯ ಬಗ್ಗೆ ನಿಮಗೆ ತಿಳಿಸುತ್ತೇವೆ…” ಎಂದು ಹೇಳಿದರು.

Join Whatsapp