ಮಣಿಪುರಕ್ಕೆ ಬಂದಿಳಿದ ‘ಇಂಡಿಯಾ’ ನಿಯೋಗ

Prasthutha|

ನವದೆಹಲಿ: ಜನಾಂಗೀಯ ಹಿಂಸಾಚಾರ ನಡೆಯುತ್ತಿರುವ ಮಣಿಪುರದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ‘ಇಂಡಿಯಾ’ ಮೈತ್ರಿಕೂಟದ 21 ಸಂಸದರ ನಿಯೋಗ ಇಂದು (ಶನಿವಾರ) ಇಲ್ಲಿಗೆ ಭೇಟಿ ನೀಡಿದೆ.

- Advertisement -


ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌದರಿ, ಗೌರವ್ ಗೊಗೊಯಿ, ಟಿಎಂಸಿಯ ಸುಶ್ಮಿತಾ ದೇವ್, ಜೆಎಂಎಂನ ಮಹುವಾ ಮಜ್ಹಿ, ಡಿಎಂಕೆಯ ಕನಿಮೋಳಿ, ಎನ್ಸಿಪಿಯ ವಂದನಾ ಚೌಹಾಣ್, ಆರ್ಎಲ್ಡಿಯ ಜಯಂತ್ ಚೌದರಿ, ಆರ್ಜೆಡಿಯ ಮನೋಜ್ ಕುಮಾರ್, ಆರ್ಎಸ್ಪಿಯ ಎನ್. ಕೆ ಪ್ರೇಮಚಂದ್ರನ್ ಮತ್ತು ವಿಸಿಕೆಯ ತಿರುಮಾವಳನ್ ನಿಯೋಗದಲ್ಲಿ ಇದ್ದಾರೆ.
‘ಇಂಡಿಯಾ’ ಮೈತ್ರಿಕೂಟದ ಸಂಸದರು, ಪ್ರತಿನಿಧಿಗಳ ನಿಯೋಗವು ನಿರಾಶ್ರಿತರ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಲಿದ್ದು, ಕುಕಿ ಸಮುದಾಯದ ಸಂತ್ರಸ್ತರೊಂದಿಗೆ ಚರ್ಚೆ ನಡೆಸಲಿದೆ. ಜುಲೈ 30ರವರೆಗೆ ಪರಿಸ್ಥಿತಿಯ ಪರಾಮರ್ಶೆ ನಡೆಸಲಿದೆ.

Join Whatsapp