ಭಾರತ- ಚೀನಾ- ಪಾಕಿಸ್ತಾನ ಗಡಿ ಉದ್ವಿಗ್ನತೆಯು ಅವರವರದೇ ಸಮಸ್ಯೆ- ಅಮೆರಿಕ

Prasthutha|

ವಾಷಿಂಗ್ಟನ್: ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಭಾರತ- ಚೀನಾ- ಪಾಕಿಸ್ತಾನಗಳ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆಗೆ ಆ ಮೂರು ದೇಶಗಳೇ ಕಾರಣ ಎಂದು ಅಮೆರಿಕ ಸಂಯುಕ್ತ ಸಂಸ್ಥಾನದ ಗೂಢಚರ ವರದಿಗಳು ಹೇಳಿವೆ.

- Advertisement -


ಪಾಕಿಸ್ತಾನದ ಪ್ರಚೋದನೆ ಮೇಲೆ ಮೋದಿಯವರ ನಾಯಕತ್ವದಲ್ಲಿ ಭಾರತದ ಮಿಲಿಟರಿಯು ಏರಿ ಹೋಗುವುದನ್ನು ರೂಢಿ ಮಾಡಿಕೊಂಡಿದೆ ಎಂದು ಕೂಡ ವರದಿಯಲ್ಲಿ ಹೇಳಲಾಗಿದೆ.
ಯುಎಸ್ಎಯ ತನಿಖಾ ಸಂಸ್ಥೆಗಳ ವಾರ್ಷಿಕ ಮಾಹಿತಿಯ ಮೊತ್ತವನ್ನು ಮಾರ್ಚ್ 8ರಂದು ಅಮೆರಿಕನ್ ಕಾಂಗ್ರೆಸ್ಸಿಗೆ ಸಲ್ಲಿಸಲಾಯಿತು. ಕಾಂಗ್ರೆಸ್ ಸಭೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಗಳ ಮುಖ್ಯಸ್ಥರು ಹಾಜರಾಗಿ ಮಾಹಿತಿ ಸಲ್ಲಿಸಿದರು.


ಕಳೆದೊಂದು ದಶಕದಲ್ಲೇ ದೊಡ್ಡದಾದ ಸೈನಿಕ ತಿಕ್ಕಾಟವು ಭಾರತ – ಚೀನಾ ಗಡಿಯಲ್ಲಿ 2020ರಲ್ಲಿ ನಡೆದಿದೆ ಹಾಗೂ ಆ ಸಂಬಂಧ ಮಾತುಕತೆ ಮುಂದುವರಿಯುತ್ತಲೇ ಇದೆ.
ಗಡಿಯಲ್ಲಿ ಮತ್ತು ವಿವಾದಿತ ಪ್ರದೇಶಗಳಲ್ಲಿ ಚೀನಾ ಮತ್ತು ಭಾರತ ಎರಡೂ ದೇಶಗಳು ಹೆಚ್ಚುವರಿ ಸೇನಾ ಪಡೆಗಳನ್ನು ನಿಯೋಜಿಸಿವೆ ಎಂದೂ ಮಾಹಿತಿ ನೀಡಲಾಗಿದೆ. ಎರಡೂ ದೇಶಗಳು ಅಣ್ವಸ್ತ್ರ ಹೊಂದಿರುವ ದೇಶಗಳಾದುದುರಿಂದ ಅಣ್ವಸ್ತ್ರ ಬಳಕೆಗೆ ಮುಂದಾದರೆ ಅಮೆರಿಕಕ್ಕೆ ಅದರಿಂದ ತೊಂದರೆ ಇದೆ. ಆದ್ದರಿಂದ ಯುಎಸ್’ಎ ಮಧ್ಯ ಪ್ರವೇಶಿಸಬೇಕು ಇಲ್ಲವೇ ಮಧ್ಯ ಪ್ರವೇಶಿಸಲು ತಯಾರಾಗಿರಬೇಕು. ಚೀನಾ ಮತ್ತು ಭಾರತದ ಎಲ್’ಎಸಿ- ಹತೋಟಿ ಗಡಿ ಗೆರೆಯಲ್ಲಿ ಸಣ್ಣ ಮಟ್ಟದ ತಿಕ್ಕಾಟವನ್ನು ಎರಡೂ ದೇಶಗಳು ಸದಾ ನಡೆಸಿವೆ ಎಂದೂ ತನಿಖಾ ಸಂಸ್ಥೆಗಳ ಮುಖ್ಯಸ್ಥರು ಕಾಂಗ್ರೆಸ್ಸಿಗೆ ತಿಳಿಸಿದರು.
2020ರ ಮೇ ತಿಂಗಳಿನಲ್ಲಿ ಪೂರ್ವ ಲಡಾಖ್’ನಲ್ಲಿ ಚೀನಾ ಭಾರತ ಮಿಲಿಟರಿ ನಡುವಿನ ಸಂಘರ್ಷದ ಬಳಿಕ ಎರಡೂ ದೇಶಗಳ ಮಿಲಿಟರಿ ಸಂಬಂಧವು ಮಂಜುಗಟ್ಟಿದೆ.
ಗಡಿಯಲ್ಲಿ ಶಾಂತಿ ನೆಲೆಸದ ಹೊರತು ಎರಡೂ ದೇಶಗಳ ಸಂಬಂಧವು ಮಾಮೂಲಿಯ ಸ್ಥಿತಿಗೆ ಬರುವುದು ಸಾಧ್ಯವಿಲ್ಲ ಎಂಬುದು ಭಾರತದ ನಿಲುವು.
ಅದೇ ರೀತಿ ಭಾರತ ಮತ್ತು ಪಾಕಿಸ್ತಾನಗಳು ಸಹ ಅಣ್ವಸ್ತ್ರಗಳ ಪೈಪೋಟಿಯನ್ನು ಹೆಚ್ಚಿಸಿಕೊಂಡಿವೆ. 2021ರ ಆರಂಭದಲ್ಲಿ ಎರಡೂ ದೇಶಗಳ ಗಡಿಯಲ್ಲಿ ಒಪ್ಪಿದ ಕದನ ವಿರಾಮದ ಬಳಿಕ ಶಾಂತಿಯು ಕಂಡು ಬರುತ್ತಿದೆಯಾದರೂ ಮಾನಸಿಕವಾಗಿ ಭಾರತ ಪಾಕ್ ಕದನೋತ್ಸಾಹ ಬತ್ತಿಲ್ಲ.

- Advertisement -


“ಪಾಕಿಸ್ತಾನವು ಭಾರತ ವಿರೋಧಿ ಉಗ್ರ ಗುಂಪುಗಳನ್ನು ಬೆಂಬಲಿಸುವ ದೀರ್ಘ ಇತಿಹಾಸವನ್ನೇ ಹೊಂದಿದೆ. ಭಾರತವು ಹಿಂದಿನ ಆಡಳಿತಗಳಂತಲ್ಲದೆ ಮೋದಿಯವರ ನಾಯಕತ್ವದಲ್ಲಿ ಪಾಕಿಸ್ತಾನದ ಪ್ರಚೋದನೆಗೆ ಕೂಡಲೆ ಮೇಲೆ ಬೀಳುವ ಪರಿಪಾಠ ಬೆಳೆಸಿಕೊಂಡಿದೆ. ಹೀಗಾಗಿ ಗಡಿಯ ಎರಡೂ ಕಡೆ ಉದ್ವಿಗ್ನತೆ, ತಿಕ್ಕಾಟ ನಡೆದೇ ಇದೆ. ಭಾರತ ಪಾಕ್ ಕಾಶ್ಮೀರದ ಎರಡೂ ಕಡೆ ಉಗ್ರರ ದಾಳಿಗಳು ನಿಂತೇ ಇಲ್ಲ. ಕಾಶ್ಮೀರದ ಹಿಂಸಾಚಾರ ಕೊನೆಯಿಲ್ಲದ್ದಾಗಿದೆ.” ಎಂದು ಮಾಹಿತಿ ನೀಡಲಾಗಿದೆ.


ಭಾರತ – ಪಾಕಿಸ್ತಾನದ ಸಂಬಂಧವು ಕೆಡಲು ಕಾಶ್ಮೀರದ ಪ್ರಶ್ನೆಯೇ ಕಾರಣವಾಗಿದೆ. ಗಡಿ ಹಾರುವ ಉಗ್ರ ಚಟುವಟಿಕೆಗಳು ಪಾಕಿಸ್ತಾನದ ಕಡೆಯಿಂದ ಹೆಚ್ಚು ಕಾಣುತ್ತಲಿವೆ.
ಉಗ್ರವಾದ ಮತ್ತು ಮಾತುಕತೆ ಎರಡೂ ಒಟ್ಟಿಗೆ ಹೋಗುವುದು ಸಾಧ್ಯವಿಲ್ಲ. ಇಸ್ಲಾಮಾಬಾದ್ ವಿಷಯಾಧಾರಿತವಾಗಿ ಶಾಂತಿಗೆ ಒಳಪಟ್ಟರೆ ಮಾತ್ರ ಶಾಂತಿ ಮಾತುಕತೆ ಸಾಧ್ಯ ಎನ್ನುತ್ತದೆ ಭಾರತ.
ಇದರ ನಡುವೆಯೇ ಭಾರತ ಮತ್ತು ಅಮೆರಿಕವು ಉಗ್ರ ದಮನ, ಉಗ್ರವಾದ ಎದುರಿಸುವ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆಸಿದವು.


ಯುಎಸ್’ಎ- ಪಾಕ್ ನಡುವೆ ಉಗ್ರ ದಮನಕ್ಕೆ ಸಹಕಾರ, ಉಗ್ರರ ನೆಲೆ ನಾಶ, ಸೈಬರ್ ಸೆಕ್ಯೂರಿಟಿ, ಉಗ್ರ ದಾಳಿಗಳನ್ನು ಎದುರಿಸುವುದು ಮೊದಲಾದ ವಿಷಯವಾಗಿ ಬಹು ದೇಶೀಯ ಸಹಕಾರದ ಬಗ್ಗೆ ಎರಡು ದಿನಗಳ ಮಾತುಕತೆ ನಡೆಯಿತು.



Join Whatsapp