ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿರುವ ಟಿ 20 ವಿಶ್ವಕಪ್ ಪಂದ್ಯಾಕೂಟಕ್ಕೆ ಭಾರತ ತಂಡವು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು ಹೊಸ ಜರ್ಸಿಯನ್ನು ಅನಾವರಣಗೊಳಿಸಿದೆ. ಹೊಸ ಜರ್ಸಿಯನ್ನು ಇಂದು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಪೇಜ್ ನಲ್ಲಿ ಬಿಡುಗಡೆಗೊಳಿಸಿದೆ.
ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಜಸ್‌ಪ್ರೀತ್ ಬುಮ್ರಾ ಮತ್ತು ಕೆಎಲ್ ರಾಹುಲ್ ನೂತನ ಜರ್ಸಿ ಧರಿಸಿರುವ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಒಮನ್ ದೇಶದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ.
ನಾಲ್ಕು ತಂಡಗಳ ಜೆರ್ಸಿ ಬಿಡುಗಡೆ
ಟಿ-20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿರುವ ಐರ್ಲೆಂಡ್, ನಮೀಬಿಯಾ, ಸ್ಕಾಟ್ಲೆಂಡ್ ಮತ್ತು ಶ್ರೀಲಂಕಾ ತಂಡಗಳ ಜೆರ್ಸಿಗಳನ್ನು ಮಂಗಳವಾರ ಬಿಡುಗಡೆ ಮಾಡಲಾಗಿತ್ತು.
ಐರ್ಲೆಂಡ್ ತಂಡದ ಜೆರ್ಸಿ ತಿಳಿ ಹಸಿರು ಮತ್ತು ಕಡು ಹಸಿರು ಬಣ್ಣದಲ್ಲಿದ್ದರೆ, ನಮೀಬಿಯಾದ ಆಟಗಾರರು ಆಕಾಶ ನೀಲಿ ಮತ್ತು ಕಡು ನೀಲಿ ಬಣ್ಣದ ವಿನ್ಯಾಸದ ಜೆರ್ಸಿ ಧರಿಸಲಿದ್ದಾರೆ. ಸ್ಕಾಟ್ಲೆಂಡ್ ತಂಡದ ಆಟಗಾರರು ತಿಳಿ ನೇರಳೆ ಮತ್ತು ಕಡು ನೇರಳೆ ಬಣ್ಣದ ಜೆರ್ಸಿ ಧರಿಸಲಿದ್ದಾರೆ. ಶ್ರೀಲಂಕಾ ದೇಶ ಎರಡು ಬಣ್ಣಗಳಲ್ಲಿ ವಿಭಿನ್ನ ಜೆರ್ಸಿ ಹೊರ ತಂದಿದೆ. ಇದರಲ್ಲಿ ಒಂದು ಜೆರ್ಸಿಯ ಬಣ್ಣ ನೀಲಿ ಮತ್ತು ಹಳದಿ ಬಣ್ಣದ ವಿನ್ಯಾಸ ಹೊಂದಿದ್ದರೆ, ಇನ್ನೊಂದು ಜೆರ್ಸಿ ಆಕಾಶ ನೀಲಿ ಮತ್ತು ಕಡು ನೀಲಿ ಬಣ್ಣದಲ್ಲಿದೆ.
ಅಕ್ಟೋಬರ್ 17ರಿಂದ ಯುಎಇ ಮತ್ತು ಓಮನ್‌ನಲ್ಲಿ ಪ್ರಾರಂಭಗೊಳ್ಳಲಿರುವ ಚುಟುಕು ಕ್ರಿಕೆಟ್ ವಿಶ್ವಕಪ್’ನಲ್ಲಿ ಈ ಬಾರಿ ಒಟ್ಟು 16 ತಂಡಗಳು ಸೆಣಸಾಡಲಿವೆ.
ಟಿ-20 ವಿಶ್ವಕಪ್‌ನಲ್ಲಿ ಭಾರತದ ವೇಳಾಪಟ್ಟಿ
ಅಕ್ಟೋಬರ್ 24
ಭಾರತ V/S ಪಾಕಿಸ್ತಾನ.
ಅಕ್ಟೋಬರ್ 31
ಭಾರತ V/S ನ್ಯೂಜಿಲೆಂಡ್.
ನವೆಂಬರ್ 3
ಭಾರತ V/S ಅಫ್ಘಾನಿಸ್ತಾನ.
ನವೆಂಬರ್ 5
ಭಾರತ VS TBD
ನವೆಂಬರ್ 8
ಭಾರತ V/S TBD