ವೆಸ್ಟ್ ಇಂಡೀಸ್ ವಿರುದ್ಧದ 2ನೇ T-20 ಪಂದ್ಯದಲ್ಲೂ ರೋಹಿತ್ ಪಡೆಗೆ ಗೆಲುವು, ತವರಿನಲ್ಲಿ ಸತತವಾಗಿ 6ನೇ ಸರಣಿ ಗೆದ್ದ ಟೀಮ್ ಇಂಡಿಯಾ !

Prasthutha|

ಕೋಲ್ಕತ್ತಾ: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ T-20 ಪಂದ್ಯವನ್ನು ಟೀಮ್ ಇಂಡಿಯಾ 8 ರನ್’ಗಳ ಅಂತರದಲ್ಲಿ ಗೆದ್ದು ಬೀಗಿದೆ. ಆ ಮೂಲಕ ಟೂರ್ನಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ತನ್ನದಾಗಿಸಿಕೊಂಡಿತು. ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ತವರು ನೆಲದಲ್ಲಿ ಸತತ 6ನೇ ಸರಣಿಯಲ್ಲಿ ದಿಗ್ವಿಜಯ ಸಾಧಿಸಿದೆ.

- Advertisement -

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ, ರಿಷಭ್ ಪಂತ್ ಹಾಗೂ ವಿರಾಟ್ ಕೊಹ್ಲಿ ಗಳಿಸಿದ ಅರ್ಧ ಶತಕಗಳ ನೆರವಿನಿಂದ 5 ವಿಕೆಟ್ ನಷ್ಟದಲ್ಲಿ 186 ರನ್’ಗಳಿಸಿತ್ತು.
ಬೃಹತ್ ಮೊತ್ತವನ್ನು ಬೆನ್ನಟ್ಟಲು ವಿಂಡೀಸ್ ಅಂತಿಮ ಓವರ್’ವರೆಗೂ ಹೋರಾಟ ನಡೆಸಿತಾದರೂ ಕೊನೆಯಲ್ಲಿ 3 ವಿಕೆಟ್ ನಷ್ಟದಲ್ಲಿ 178 ರನ್ ಗಳಿಸಲಷ್ಟೇ ಶಕ್ತವಾಯಿತು.‌ ಹೀಗಾಗಿ 8 ರನ್’ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು.
ವೆಸ್ಟ್ ಇಂಡೀಸ್ ಇನ್ನಿಂಗ್ಸ್‌’ನಲ್ಲಿ ರೋವ್’ಮನ್ ಪೊವೆಲ್ 68 ರನ್ ಹಾಗೂ ನಿಕೊಲಸ್ ಪೂರನ್ 62 ರನ್’ಗಳಿಸಿ ಶತಕದ ಜೊತೆಯಾಟ ಆಡಿದರೂ ಸಹ ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು.

Join Whatsapp