ಮುಂಬೈ: I.N.D.I.A ಮೈತ್ರಿಕೂಟದ ಜಂಟಿ ಲೋಗೊ ಅನಾವರಣವನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಇಂಡಿಯಾ ಸಂಘಟಕರು ಶುಕ್ರವಾರ ತಿಳಿಸಿದ್ದಾರೆ.
ಮುಂಬೈನ ಪಂಚತಾರಾ ಹೋಟೆಲ್ ಗ್ರ್ಯಾಂಡ್ ಹಯಾತ್ನಲ್ಲಿ ಶುಕ್ರವಾರ ಬೆಳಗ್ಗೆ ಇಂಡಿಯಾ ಕಾನ್ ಕ್ಲೇವ್-3.0 ಅದ್ದೂರಿಯಾಗಿ ಪ್ರಾರಂಭವಾಗಿದೆ.
ಲೋಗೊ ಬಿಡುಗಡೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಆತಿಥೇಯ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಮತ್ತು ಕಾಂಗ್ರೆಸ್ನ ವಿರೋಧ ಪಕ್ಷದ ನಾಯಕ ವಿಜಯ್ ವಡ್ಡೆಟ್ಟಿವಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. 28 ವಿರೋಧ ಪಕ್ಷಗಳ ಕೆಲ ನಾಯಕರು ತಮ್ಮ ಕೆಲ ಸಲಹೆಗಳನ್ನು ನೀಡಿದ್ದಾರೆ. ಲೋಗೋವನ್ನು ಅಂತಿಮಗೊಳಿಸುವ ಮೊದಲು ಅವುಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ರಾವತ್ ಹೇಳಿದರು