ಇಂಡಿಯಾ ಮೈತ್ರಿಕೂಟ ಸನಾತನ ಸಂಸ್ಕೃತಿ ನಾಶ ಮಾಡಲು ಸಂಚು ರೂಪಿಸಿದೆ: ಪ್ರಧಾನಿ ನರೇಂದ್ರ ಮೋದಿ

Prasthutha|

ಹೊಸದಿಲ್ಲಿ: ಇಂಡಿಯಾ (I.N.D.I.A) ಮೈತ್ರಿಕೂಟ ಭಾರತದ ಸನಾತನ ಸಂಸ್ಕೃತಿಯನ್ನು ನಾಶ ಮಾಡುವ ಸಂಚು ರೂಪಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ (ಸೆಪ್ಟೆಂಬರ್‌ 14) ವಾಗ್ದಾಳಿ ನಡೆಸಿದರು.

- Advertisement -

ಅವರು ಚುನಾವಣೆಗೆ ಸಜ್ಜಾಗುತ್ತಿರುವ ಮಧ್ಯಪ್ರದೇಶದ ಬೀನಾ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ. ವಿಪಕ್ಷಗಳ ಮೈತ್ರಿಕೂಟಕ್ಕೆ ನಾಯಕನೂ ಇಲ್ಲ, ದೂರದೃಷ್ಟಿಯೂ ಇಲ್ಲ ಎಂದು ಈ ವೇಳೆ ವ್ಯಂಗ್ಯವಾಡಿದರು.

ಈ ಇಂಡಿಯಾ ಮೈತ್ರಿಕೂಟಕ್ಕೆ ಯಾವ ನಾಯಕನೂ ಇಲ್ಲ. ಆದರೆ ಅವರು ಭಾರತದ ಸಂಸ್ಕೃತಿಯ ಮೇಲೆ ದಾಳಿ ನಡೆಸುವ ರಹಸ್ಯ ಅಜೆಂಡಾ ಹೊಂದಿವೆ. ಅಷ್ಟೇ ಅಲ್ಲ ಇಂಡಿಯಾ ಮೈತ್ರಿಕೂಟ ಸನಾತನ ಸಂಸ್ಕೃತಿಯನ್ನು ನಾಶಗೊಳಿಸುವ ನಿರ್ಧಾರ ಕೈಗೊಂಡಿರುವುದಾಗಿ ಪ್ರಧಾನಿ ಮೋದಿ ದೂರಿದರು.

Join Whatsapp