ಕೀವ್/ ಉಕ್ರೇನ್: ಉಕ್ರೇನ್ನ ಸ್ವಾತಂತ್ರ್ಯ ದಿನವಾದ ಆ. 24ರಂದೇ ಪೂರ್ವ ಉಕ್ರೇನ್ನ ಚಾಪ್ಲಿನ್ನ ರೈಲು ನಿಲ್ದಾಣವೊಂದಕ್ಕೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು, ಕನಿಷ್ಠ 22 ನಾಗರಿಕರು ಮೃತಪಟ್ಟಿದ್ದು, ಪ್ಯಾಸೆಂಜರ್ ರೈಲೊಂದು ಬೆಂಕಿಗಾಹುತಿಯಾಗಿದೆ.
ರಕ್ಷಣಾ ಕಾರ್ಯಗಳು ಮುಂದುವರಿದಿದೆ. ಆದರೆ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ರಷ್ಯಾದ ಪಡೆಗಳು ಚಾಪ್ಲಿನ್ ನಗರದ ಮೇಲೆ ಎರಡು ಬಾರಿ ಶೆಲ್ ದಾಳಿ ಮಾಡಿದೆ. ಕ್ಷಿಪಣಿ ತನ್ನ ಮನೆಗೆ ಅಪ್ಪಳಿಸಿದಾಗ ಮೊದಲ ದಾಳಿಯಲ್ಲಿ ಒಬ್ಬ ಹುಡುಗ ಸಾವನ್ನಪ್ಪಿದ. ನಂತರ ರೈಲ್ವೇ ನಿಲ್ದಾಣಕ್ಕೆ ರಾಕೆಟ್ ಬಡಿದು ಐದು ರೈಲು ಬೋಗಿಗಳು ಬೆಂಕಿಗಾಹುತಿಯಾಗಿದ್ದು, 21 ಜನರು ಸಾವನ್ನಪ್ಪಿರುವುದಾಗಿ ಝೆಲೆನ್ಸ್ಕಿಯ ಸಹಾಯಕ ಕೈರಿಲೊ ಟಿಮೊಶೆಂಕೊ ಹೇಳಿದ್ದಾರೆ.