ಸೌದಿ ಅರೇಬಿಯಾದ ತಾಯಿಫ್ ಇಂಡಿಯನ್ ಸೋಷಿಯಲ್ ಫಾರಂನಿಂದ ಸ್ವಾತಂತ್ರ್ಯ ದಿನಾಚರಣೆ

Prasthutha|

ಸೌದಿ ಅರೇಬಿಯಾ: ಅನಿವಾಸಿ ಭಾರತೀಯರ ಸಂಘಟನೆಯಾದ ಇಂಡಿಯನ್ ಸೋಶಿಯಲ್ ಫಾರಂ ಇದರ ತಾಯಿಫ್ ಘಟಕದ ವತಿಯಿಂದ 76ನೇ ಭಾರತದ ರಾಷ್ಟ್ರೀಯ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಬಹಳ ಸಡಗರದಿಂದ ತಾಯಿಫ್ ನಲ್ಲಿ ಆಚರಿಸಲಾಯಿತು.

- Advertisement -

ಬೆಳಿಗ್ಗೆ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಐಎಎಫ್ ತಾಯಿಫ್ ಘಟಕದ ಅಧ್ಯಕ್ಷ ಜನಾಬ್ ಸಾಜಿದ್ ಗಂಜಿಮಠ ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜನಾಬ್ ಸಂಶುದ್ದೀನ್ ತುಂಬೆ ಹಾಗೂ ಜಮೀಲ್ ಗುಲ್ಬರ್ಗ  ಭಾಗವಹಿಸಿದ್ದರು. ಮಲಿಕ್ ಇಡ್ಯ ಅತಿಥಿಗಳನ್ನು ಸ್ವಾಗತಿಸಿದರು. ನಂತರ ಶಾಲಾ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕೊನೆಯಲ್ಲಿ ಐಎಸ್ಎಫ್ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.

- Advertisement -

Join Whatsapp