ಭಾರತ – ನ್ಯೂಝಿಲೆಂಡ್ ಅಂತಿಮ ಟೆಸ್ಟ್ | ಗೆಲುವಿನತ್ತ ಭಾರತ

Prasthutha|

ಮುಂಬೈ : ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವು ಬಹುತೇಕ ಖಚಿತಗೊಂಡಿದೆ. 540 ರನ್‌ಗಳ ಬೃಹತ್ ಗೆಲುವಿನ ಗುರಿ ಹಿಂಬಾಲಿಸಿದ ನ್ಯೂಜಿಲೆಂಡ್, ಮೂರನೇ ದಿನದಾಟದ ಅಂತ್ಯಕ್ಕೆ 45 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 140 ರನ್ ಗಳಿಸಲಷ್ಟೇ ಶಕ್ತವಾಗಿದೆ.

- Advertisement -

400 ರನ್‌ಗಳ ಹಿನ್ನಡೆಯಲ್ಲಿರುವ ಕಿವೀಸ್, ಸೋಲಿನ ಅಂತರವನ್ನು ತಗ್ಗಿಸಲು ಪ್ರಯತ್ನಿಸಲಿದೆ. ಟೀಂ ಇಂಡಿಯಾ ಈ ಪಂದ್ಯ ಹಾಗೂ ಸರಣಿ ಗೆಲುವನ್ನು ದಾಖಲಿಸುವುದು ಬಹುತೇಕ ಖಚಿತವೆನಿಸಿದೆ. ಭಾರತ ಪರ ಆರ್. ಅಶ್ವಿನ್ ಮೂರು ವಿಕೆಟ್ ಕಿತ್ತು ಮಿಂಚಿದ್ದಾರೆ.

Join Whatsapp