► ► 2020ರ ಅಂಕಿ ಅಂಶದ ಪ್ರಕಾರ ಪ್ರತೀ ಪುರುಷರಿಗೆ ಎಷ್ಟು ಸ್ತ್ರೀಯರು ಗೊತ್ತಾ?
ತಿರುವನಂತಪುರಂ: 2020ರ ನೂತನ ಅಂಕಿ ಅಂಶದ ಪ್ರಕಾರ ಹೆಣ್ಣು ಮಕ್ಕಳ ಜನನದಲ್ಲಿ ಏರಿಕೆಯಾಗಿದ್ದು, ಸದ್ಯ ಕೇರಳವು 1000 ಪುರುಷರಿಗೆ 968 ಮಹಿಳೆಯರ ಅನುಪಾತವನ್ನು ಹೊಂದಿದೆ. ಈ ಅನುಪಾತವು ಒಂದು ದಶಕದ ಅತಿದೊಡ್ಡ ಅನುಪಾತ ದರವೆಂದು ಪರಿಗಣಿಸಲಾಗಿದೆ.
2019 ರಲ್ಲಿ, ಪ್ರತಿ 1000 ಪುರುಷರಿಗೆ 960 ಮಹಿಳೆಯರ ಅನುಪಾತವಿದ್ದು, 2018ರಲ್ಲಿ ಇದು 963 ಆಗಿತ್ತು. 2011ರಲ್ಲಿ ಈ ಅನುಪಾತವು 1,000 ಪುರುಷರಿಗೆ 939 ಆಗಿತ್ತು. ಆದರೆ 2020ಲ್ಲಿ ಒಟ್ಟು 4,46,891 ಮಕ್ಕಳ ಜನನವಾಗಿದ್ದು, ಈ ಪೈಕಿ 2,19,809 ಹುಡುಗಿಯರು ಮತ್ತು 2,27,053 ಹುಡುಗರು. ಆದರೆ 29 ಮಕ್ಕಳ ಲಿಂಗವನ್ನು ದಾಖಲಿಸಲಾಗಿಲ್ಲ.
ಅದೂ ಅಲ್ಲದೇ 19 ವರ್ಷ ಮತ್ತು ಅದಕ್ಕಿಂತ ಕೆಲಗಿನ ಯುವತಿಯರು ಗರ್ಭಿಣಿಯಾಗುವ ಪ್ರಕರಣವು 2020ರಲ್ಲಿ ಗಣನೀಯ ಇಳಿಕೆ ಕಂಡಿದೆ. 2019ರಲ್ಲಿ ಈ ಸಂಖ್ಯೆ 20,998 ಇದ್ದರೆ, 2020ರಲ್ಲಿ ಇದು 17,202 ಕ್ಕೆ ಇಳಿಕೆಯಾಗಿದೆ.